ಸಾಹಿತಿ ಎಚ್. ಭೀಮರಾವ್ ವಾಷ್ಠರ್ ರಿಗೆ ಕನ್ನಡ ಕಣ್ಮಣಿ ರಾಷ್ಟ್ರ ಪ್ರಶಸ್ತಿ ಪ್ರದಾನ

0

ಬೆಳಕು ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ರಾಯಚೂರು ವೀರಶೈವ ಸಭಾ ಭವನದ ದಿವ್ಯ ಸಭಾಂಗಣದಲ್ಲಿ ಜರುಗಿದ, ರಾಜ್ಯಮಟ್ಟದ ಬೆಳಕು ಸಾಹಿತ್ಯ ಸಮಾರಂಭದ ಭವ್ಯ ವೇದಿಕೆಯಲ್ಲಿ ಸುಳ್ಯದ ಖ್ಯಾತ ಸಾಹಿತಿ ಮತ್ತು ಜ್ಯೋತಿಷಿ ಶ್ರೀ ಎಚ್. ಭೀಮರಾವ್ ವಾಷ್ಠರ್ ಕೋಡಿಹಾಳ ಅವರಿಗೆ 2023 ನೇ ಸಾಲಿನ ಕನ್ನಡ ಕಣ್ಮಣಿ ರಾಷ್ಟ್ರ ಪ್ರಶಸ್ತಿಯನ್ನು ಗಣ್ಯರ ಸಮಾಕ್ಷಮ ನೀಡಿ ಗೌರವಿಸಲಾಯಿತು.

ಜ್ಯೋತಿಷ್ಯ, ಸಾಹಿತ್ಯ, ಸಂಘಟನಾ ಕ್ಷೇತ್ರದಲ್ಲಿ ಮಾಡುತ್ತಿರುವ ಅಪಾರ ಸಾಧನೆಗಾಗಿ ರಾಷ್ಟ್ರಮಟ್ಟದ ಕನ್ನಡ ಕಣ್ಮಣಿ ಪ್ರಶಸ್ತಿ ಲಭಿಸಿದೆ. ಹೆಚ್. ಭೀಮರಾವ್ ವಾಷ್ಠರ್ ಅವರು ವೃತ್ತಿಯಲ್ಲಿ ವಂಶಪಾರಂಪರ್ಯ ಖ್ಯಾತ ಜ್ಯೋತಿಷ್ಯರಾಗಿದ್ದು ಪ್ರವೃತ್ತಿಯಲ್ಲಿ ಕಲೆ ಸಂಗೀತ ಮತ್ತು ಸಾಹಿತ್ಯಪರ ಸೇವೆ ಮಾಡುತ್ತಿದ್ದಾರೆ. ಸಮಾರಂಭದ ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿ ಬೆಳಕು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ, ಸಮ್ಮೇಳನ ಅಧ್ಯಕ್ಷ ಶ್ರೀ ಅಭಯ್ ಕೃಷ್ಣಯ್ಯ, ಪತ್ರಕರ್ತ ಲಕ್ಷ್ಮಣ್ ಬಾರಿಕೇರ, ಸಾಹಿತಿ ಮಹೇಂದ್ರ ಕುರ್ಡಿ ಇನ್ನಿತರರು ಉಪಸ್ಥಿತರಿದ್ದರು.