ಐವರ್ನಾಡು ಗ್ರಾಮ ಪಂಚಾಯತ್ ಬೃಹತ್ ಸ್ವಚ್ಛತಾ ಕಾರ್ಯಕ್ರಮ

0

ದೇರಾಜೆ ಗೆಳೆಯರ ಬಳಗದ ವತಿಯಿಂದ ಮ್ಯಾರಥಾನ್ ಓಟ

ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ನಡೆಯುವ ಮಾಸಿಕ ಸ್ವಚ್ಛತಾ ಕಾರ್ಯಕ್ರಮವು ದೇರಾಜೆ ಗೆಳೆಯರ ಬಳಗ ಐವರ್ನಾಡಿನ ಸಹಯೋಗದೊಂದಿಗೆ ಐವರ್ನಾಡು ಗ್ರಾಮ ಪಂಚಾಯತ್ ವಠಾರ ಹಾಗೂ ಮುಖ್ಯ ರಸ್ತೆಯ ಬದಿಯಲ್ಲಿ ಜ.07 ರಂದು ನಡೆಯಿತು.


ಗ್ರಾಮ ಪಂಚಾಯತ್ ವಠಾರ
ದಿಂದ ಬಾಂಜಿಕೋಡಿವರೆಗೆ ನಡೆಯಿತು ಹಾಗೂ ಸ್ವಚ್ಛತಾ ಕಾರ್ಯಕ್ರಮದ ನಂತರ ದೇರಾಜೆ ಗೆಳೆಯರ ಬಳಗದ ವತಿಯಿಂದ ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಬಾಂಜಿಕೋಡಿಯಿಂದ ಗ್ರಾಮ ಪಂಚಾಯತ್ ಗ್ರಾಮವಿಕಾಸ ಸಭಾ ಭವನದವರೆಗೆ ಮ್ಯಾರಥಾನ್ ಓಟ ನಡೆಯಿತು.


ಓಟದಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಯಸ್. ಯನ್. ಮನ್ಮಥ ರು ಬಹುಮಾನ ವಿತರಿಸಿದರು .
ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರು ,ಸದಸ್ಯರು ,ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಪಂಚಾಯತ್ ಸಿಬ್ಬಂದಿಗಳು, ಗೆಳೆಯರ ಬಳಗ ದೇರಾಜೆ ಇದರ ಅಧ್ಯಕ್ಷರು, ಸದಸ್ಯರು,ಸಂಜೀವಿನಿ ಸಂಘದ ಎಂ.ಬಿ.ಕೆ,ಎಲ್.ಸಿ.ಆರ್.ಪಿಗಳು, ಸಖಿಗಳು ಮತ್ತು ಎಲ್ಲಾ ಸದಸ್ಯರು ಹಾಗೂ ಊರಿನ ಪ್ರಮುಖರು ಭಾಗವಹಿಸಿದ್ದರು.