ಅರಂತೋಡು: ಪೂಜಾರಿಗದ್ದೆಯಲ್ಲಿ ಚಿರತೆ ದಾಳಿಗೆ ಆಡು ಬಲಿ

0

ಹಟ್ಟಿಯ ಬಳಿಯಿದ್ದ ಮೂರು ಆಡುಗಳ ಮೇಲೆ ರಾತ್ರಿಯ ವೇಳೆ ಚಿರತೆ ದಾಳಿ ನಡೆಸಿ, ಒಂದನ್ನು ತಿಂದು ಉಳಿದ ಎರಡು ಆಡುಗಳನ್ನು ಕೊಂದು ಹಾಕಿದ ಘಟನೆ ಜ.5ರಂದು ರಾತ್ರಿ ಸಂಭವಿಸಿದೆ.

ಪೂಜಾರಿಗದ್ದೆ ನಿವಾಸಿ, ಲೀಲಾವತಿ ಅಡ್ಕಬಳೆ ಅವರ ಮನೆಯಲ್ಲಿ ಸಾಕುತ್ತಿದ್ದ ಮೂರು ಆಡುಗಳನ್ನು ಹಟ್ಟಿಯ ಬಳಿ ಕಟ್ಟಿಹಾಕಲಾಗಿದ್ದು, ಚಿರತೆ ರಾತ್ರಿ ವೇಳೆ ದಾಳಿ ನಡೆಸಿ, ಕೊಂದು ಹಾಕಿದೆ ಎಂದು ತಿಳಿದುಬಂದಿದೆ.