ಇಂದು ರಾತ್ರಿ ಕಲ್ಲುರ್ಟಿ ,ಕುಪ್ಪೆ ಪಂಜುರ್ಲಿ ಹಾಗೂ ಗುಳಿಗ ದೈವಗಳ ನೇಮೋತ್ಸವ
ಬೆಳ್ಳಾರೆ ಗ್ರಾಮದ ದೇವಿನಗರ – ಕೊಳಂಬಳ (ಉಮಿಕ್ಕಳ) ದಲ್ಲಿ ಶ್ರೀ ರಕ್ತೇಶ್ವರಿ ದೇವಿ ಮತ್ತು ವರ್ಣಾರ ಪಂಜುರ್ಲಿ ದೈವದ ನೇಮೋತ್ಸವವು ದೇರೆಬೈಲು ತಂತ್ರಿ ಶ್ರೀ ಪತಂಜಲಿ ಶಾಸ್ತ್ರಿ ಮುಕ್ಕೂರು ಇವರ ನೇತೃತ್ವದಲ್ಲಿ ಭಕ್ತಿ,ಸಂಭ್ರಮದಿಂದ ಜ.07 ರಂದು ರಾತ್ರಿ ನಡೆಯಿತು.
ಬೆಳಿಗ್ಗೆ ಸ್ವಸ್ತಿ ಪುಣ್ಯಾಹ,ಗಣಪತಿ ಹೋಮ,ಬಳಿಕ ಕಡಿಯಲಾಯಿತು. ನಾಗತಂಬಿಲ, ರಕ್ತೇಶ್ವರಿ ದೇವಿಯ ತಂಬಿಲ,ಸಂಜೆ ಭಂಡಾರ ತೆಗೆಯಲಾಯಿತು.ರಾತ್ರಿ ಶ್ರೀ ರಕ್ತೇಶ್ವರಿ ಭಜನಾ ಮಂಡಳಿ ಕೊಳಂಬಳ ಬೆಳ್ಳಾರೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಶ್ರೀ ರಕ್ತೇಶ್ವರಿ ನೇಮೋತ್ಸವ ನಡೆದ ಬಳಿಕ ವರ್ಣಾರ ಪಂಜುರ್ಲಿ ನೇಮೋತ್ಸವ ಭಕ್ತಿ,ಸಂಭ್ರಮದಿಂದ ನಡೆಯಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ವಿಶ್ವನಾಥ ಕೆ, ಕಾರ್ಯದರ್ಶಿ ರಾಮಕೃಷ್ಣ ಪ್ರಭು,ಕೋಶಾಧಿಕಾರಿ ವಸಂತ ಬೋರ್ಕರ್,ಸದಸ್ಯರಾದ ದಿವಾಕರ ರೈ ಮರಿಕೇಯಿ, ಪ್ರದೀಪ ರೈ ಅಜ್ರಂಗಳ,ದಿನೇಶ್ ಕುಮಾರ್ ಕೊಳಂಬಳ,ಗೋವರ್ಧನ ಬೆಳ್ಳಾರೆ, ಶಿವರಾಮ ಶೆಟ್ಟಿ ಯು, ಸಂಜೀವ ಕಲಾಯಿ ಹಾಗೂ ಸಾವಿರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.
ಜ.08 ರಂದು ಸಂಜೆ ಗಂಟೆ 6.00 ಕ್ಕೆ ಸುಮಾ ವಿ.ಆಚಾರ್ ಕಿಲಂಗೋಡಿ ಮತ್ತು ಬಳಗದವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ಗಂಟೆ 8.00 ಕ್ಕೆ ಕಲ್ಲುರ್ಟಿ ದೈವದ ನೇಮೋತ್ಸವ ನಡೆಯಲಿದೆ.
ರಾತ್ರಿ ಗಂಟೆ 8.30 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಗಂಟೆ 10.00 ಕ್ಕೆ ಕುಪ್ಪೆಪಂಜುರ್ಲಿ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಶ್ರೀ ದೈವಗಳ ಪ್ರಸಾದವನ್ನು ಸ್ವೀಕರಿಸಿ,ದೈವಾನುಗ್ರಹಕ್ಕೆ ಪಾತ್ರರಾಗಬೇಕೆಂದು ದೈವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.