ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವದ ಪೂರ್ವಭಾವಿ ಸಭೆ

0

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವವು ಫೆಬ್ರವರಿ ತಿಂಗಳಲ್ಲಿ ಜರುಗಲಿದ್ದು, ಆ ಪ್ರಯುಕ್ತ ನೂತನ ಉತ್ಸವ ಸಮಿತಿಯನ್ನು ಜ.7ರಂದು ರಚಿಸಲಾಗಿದ್ದು, ಉತ್ಸವ ಸಮಿತಿಯ ಅಧ್ಯಕ್ಷರಾಗಿ ರಜತ್ ಅಡ್ಕಾರು ಅವರು ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಗಳಾಗಿ ದಾಮೋದರ ಮಹಾಬಲಡ್ಕ, ಮನು ಎನ್. ಪದವು, ರವಿಶಂಕರ್ ಹೊಳ್ಳ, ಮೋನಪ್ಪ ಗೌಡ ಪೇರಾಲು, ಖಜಾಂಜಿಯಾಗಿ ನಿವೃತ್ತ ಎ.ಎಸ್.ಐ. ಭಾಸ್ಕರ ಅಡ್ಕಾರು ಆಯ್ಕೆಯಾದರು.

ಜಾತ್ರೋತ್ಸವದ ಪೂರ್ವಭಾವಿ ಸಭೆಯು ದೇಗುಲದ ಶ್ರೀ ಕಾರ್ತಿಕೇಯ ಸಭಾಭವನದಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರ ಗುರುರಾಜ್ ಭಟ್ ಅಡ್ಕಾರು, ದೇವಸ್ಥಾನದ ಆಡಳಿತಾಧಿಕಾರಿ ಸುಬ್ಬಯ್ಯ ಕೆ.ಪಿ., ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯರಾಮ ರೈ ಜಾಲ್ಸೂರು, ಉತ್ಸವ ಸಮಿತಿ ನಿರ್ಗಮಿತ ಅಧ್ಯಕ್ಷ ಗಿರಿಧರ ಗೌಡ ವಿನೋಬನಗರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಧಾಕರ ಕಾಮತ್ ವಿನೋಬನಗರ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ನ.ಸೀತಾರಾಮ, ಡಾ.ಗೋಪಾಲಕೃಷ್ಣ ಭಟ್ ಕಾಟೂರು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.