ಅಮಚೂರ್ ಕೋಡಿ ಕುಟುಂಬದಲ್ಲಿ ವಿಷ್ಣುಮೂರ್ತಿ, ಧರ್ಮದೈವ ಮತ್ತು ಪರಿವಾರ ದೈವಗಳ ನಡಾವಳಿ

0

ಅಮಚೂರ್ ಕೋಡಿ ಕುಟುಂಬಸ್ಥರ ಶ್ರೀ ವೆಂಕಟ್ರಮಣ ದೇವರ ಹರಿಸೇವೆ, ಶ್ರೀ ಕಂಚಿರಾಯ ದೈವದ ಪೂಜೆ, ಶ್ರೀ ಮಹಾವಿಷ್ಣುಮೂರ್ತಿ ಮತ್ತು ಧರ್ಮದೈವ, ಉಪದೈವಗಳ ನಡಾವಳಿಗಳು ಜ. 7 ಮತ್ತು 8 ರಂದು ಮಡಿಕೇರಿ ತಾಲೂಕಿನ ಪೆರಾಜೆ ತರವಾಡು ಮನೆ ನಡೆಯಿತು. ಜ. 07ರಂದು ಬೆಳಿಗ್ಗೆ ಶ್ರೀ ವೆಂಕಟ್ರಮಣ ದೇವರ ಹರಿಸೇವೆ, ಸಂಜೆ ಕಂಚಿರಾಯ ದೈವದ ಪೂಜೆ, ರಾತ್ರಿ ದೈವಗಳ ನಡಾವಳಿಗೆ ಕೂಡುವುದು, ಬಳಿಕ ಗುರು ಕಾರ್ನೂರು, ದೇವತೆ, ವ್ಯಾಘ್ರ ಚಾಮುಂಡಿ, ವರ್ಣಾರ ಪಂಜುರ್ಲಿ, ಕೊರತ್ತಿ, ಸ್ಥಳ ಗುಳಿಗ, ಮಂತ್ರ ಗುಳಿಗ ಹಾಗೂ ಹೊರಗಿನ ಪಾಷಾಣ ಮೂರ್ತಿ ದೈವಗಳ ಕೋಲಗಳು ನಡೆಯಿತು.


ಜ. 8ರಂದು ಪೂರ್ವಾಹ್ನ ಪೊಟ್ಟ ದೈವ ಮತ್ತು ರಕೇಶ್ವರಿ ದೈವಗಳ ಕೋಲಗಳು ಬಳಿಕ ಶ್ರೀ ವಿಷ್ಣುಮೂರ್ತಿ, ರುದ್ರ ಚಾಮುಂಡಿ ಹಾಗೂ ಪಾಷಾಣ ಮೂರ್ತಿ ದೈವಗಳ ಕೋಲಗಳು
ಮಧ್ಯಾಹ್ನ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು ಕೋಡಿ ಕುಟುಂಬದ ಅಧ್ಯಕ್ಷ ವಾಸುದೇವ ಕೋಡಿ, ಕಾರ್ಯದರ್ಶಿ ಭಾಸ್ಕರ ಕೋಡಿ, ಕುಟುಂಬದ ಹಿರಿಯರಾದ ಕುಶಾಲಪ್ಪ ಕೋಡಿ ಸೇರಿದಂತೆ ಕೋಡಿ ಕುಟುಂಬಸ್ಥರು, ಬಂಧು ಮಿತ್ರರು, ಗ್ರಾಮಸ್ಥರು, ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ದೈವಗಳ ಪ್ರಸಾದ ಸ್ವೀಕರಿಸಿದರು.