ಎಡಮಂಗಲದ ಕಾರಂಜಿಗುಡ್ಡ ಎಂಬಲ್ಲಿ ಅಸ್ತಿಪಂಜರವೊಂದು ಪತ್ತೆಯಾಗಿದ್ದು, ಇದು ಆರು ತಿಂಗಳ ಹಿಂದೆ ಕಾಣೆಯಾಗಿದ್ದ ಬಾಕೃಷ್ಣ ಗೌಡರದೆಂದು ತಿಳಿದುಬಂದಿದೆ.
ಸ್ಥಳೀಯರು ಸೊಪ್ಪು ತರಲು ಗುಡ್ಡೆಗೆ ಹೋಗಿದ್ದಾಗ ಮನುಷ್ಯನ ಅಸ್ತಿ ಪಂಜರ ಕಂಡು ಬಂತು. ವಿಷಯ ತಿಳಿದ ಪಾದೆ ಮನೆ ಬಾಲಕೃಷ್ಣ ಗೌಡರ ಮನೆಯವರು ಸ್ಥಳಕ್ಕೆ ಹೋಗಿ ನೋಡಿ ಬೆಳ್ಳಾರೆ ಪೋಲೀಸ್ ಇಲಾಖೆಗೆ ತಿಳಿಸಿದರು. ಪೋಲೀಸರು ಆಗಮಿಸಿ ಅಸ್ತಿ ಪಂಜರ ತನಿಖೆ ನಡೆಸಿದ್ದಾರೆ.









ಈ ಬಗ್ಗೆ ಮೃತರ ಪುತ್ರ ಯತೀಶ್ ಎಂಬವರು ಪೊಲೀಸರಿಗೆ ಮಾಹಿತಿ ನೀಡಿದ್ದು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.
ಮರದಿಂದ ಮರ ಕೆಸು ಸಂಗ್ರಹಿಸುವಾಗ ಮರದಿಂದ ಬಿದ್ದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.









