ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ವಾರ್ಷಿಕ ಕ್ರೀಡಾ ದಿನಾಚರಣೆ

0

ಸುಳ್ಯದ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ 2023-24ನೇ ಸಾಲಿನ ಕ್ರೀಡೋತ್ಸವವನ್ನು ಜ.9 ರಂದು ಕೆವಿಜಿ ಮೈದಾನದಲ್ಲಿ ಅದ್ದೂರಿಯಾಗಿ ನಡೆಸಲಾಯಿತು. ಪ್ರಾರ್ಥನೆಯ ಮೂಲಕ ಕಾರ್ಯಕ್ರಮ ಆರಂಭವಾಯಿತು. ಮೊದಲಿಗೆ ಶಾಲೆಯ ವಿದ್ಯಾರ್ಥಿಗಳಾದ ಇಶಾನ್ ಅಹಮದ್, ಸಾಕ್ಷಿ, ಸನಫ್, ಪುನರ್ವಿ, ಪ್ರತೀಕ,ಪ್ರತಿಕ್ಷ ಮತ್ತು ಅಝೀಲ್ ಕ್ರೀಡಾ ಜ್ಯೋತಿಯನ್ನು ಬೆಳಗಿದರು. ಬಳಿಕ ಅತಿಥಿಗಳಿಗೆ 4 ತಂಡದ ( ಹಳದಿ, ಕೆಂಪು, ಹಸಿರು ಮತ್ತು ನೀಲಿ) ನಾಯಕರುಗಳನ್ನು ಪರಿಚಯಿಸಲಾಯಿತು. ನಂತರ ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.


ಕ್ರೀಡೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ರಣಜಿ ತಂಡದ ಮುಖ್ಯಸ್ಥ, ಗೋವಾ ಕ್ರಿಕೆಟ್ ತಂಡದ ಕೋಚ್ ಆಗಿರುವ ಶ್ರೀ ದೊಡ್ಡ ಗಣೇಶ್ ಕ್ರೀಡೋತ್ಸವಕ್ಕೆ ಚಾಲನೆಯನ್ನು ನೀಡಿ ‘ ವಿದ್ಯಾರ್ಥಿಗಳೆಲ್ಲ ಗುರಿ ಇಟ್ಟು ಸಾಧನೆ ಮಾಡಬೇಕು. ಪೋಷಕರಾದವರು ವಿದ್ಯಾರ್ಥಿಗಳಿಗೆ ಮೊಬೈಲ್ ಕೊಡದೆ, ಅವರಿಗಿರುವ ಆಸಕ್ತಿಯನ್ನು ಗುರುತಿಸಿ ಅದರಲ್ಲಿ ಅವರು ಮುನ್ನಡೆಯುವಂತೆ ಮಾಡಬೇಕು’ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಶಾಲಾ ನಿರ್ದೇಶಕಿ ಡಾ. ಜ್ಯೋತಿ ಆರ್ ಪ್ರಸಾದ್ ಮತ್ತು ವಿ ಟಿ ಯು ಬೆಳಗಾವಿ ಇಲ್ಲಿಯ ಕಾರ್ಯಕಾರಿ ಮಂಡಳಿಯ ಸದಸ್ಯನಾಗಿರುವ ಡಾ. ಉಜ್ವಲ್ ಯು.ಜೆ ಶುಭ ಹಾರೈಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಎನ್. ಎ ರಾಮಚಂದ್ರ’ ನಮ್ಮ ಉತ್ತಮ ಆರೋಗ್ಯಕ್ಕೆ ಕ್ರೀಡೆಯು ಅತ್ಯಗತ್ಯವಾದುದು . ಇವತ್ತಿನ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿಯನ್ನು ನೀಡಿದ ಪ್ರಾಂಶುಪಾಲರಿಗೂ, ಶಿಕ್ಷಕ ವೃಂದಕೂ ಅಭಿನಂದನೆಯನ್ನು ಸಲ್ಲಿಸುವುದು ನಮ್ಮ ಕರ್ತವ್ಯ’ ಎಂದರು .ಈ ಕ್ರೀಡೋತ್ಸವದ ವೇದಿಕೆಯಲ್ಲಿ ಕೆ ವಿ ಜಿ ಐ ಪಿಎ ಸ್ ನ ಗವರ್ನರ್ ಕೌನ್ಸಿಲ್ ಸದಸ್ಯರಾದ ಕೆ. ಎಸ್ ಗಂಗಾಧರ , ಸಂತೋಷ್ ಕುತ್ತಮೊಟ್ಟೆ ಮತ್ತು ಶಾಲಾ ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಉಪಸ್ಥಿತರಿದ್ದರು.

 ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪಥಸಂಚಲನ, ಯೋಗ, ಕರಾಟೆ, ವಿವಿಧ ಕ್ರೀಡಾ ನೃತ್ಯ ಮತ್ತು ಕ್ರೀಡಾ ಡ್ರಿಲ್ ಗಳ ಮೂಲಕ ಮನೋರಂಜನೆಯನ್ನು ನೀಡಿದರು. ಬಳಿಕ  ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಸಿ, ಬಹುಮಾನವನ್ನು ನೀಡಲಾಯಿತು. ಜೊತೆಗೆ 2023-24ನೇ ಸಾಲಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಕೊಟ್ಟು ಗೌರವಿಸಲಾಯಿತು.

 





ಈ ಸಂದರ್ಭದಲ್ಲಿ ಪೋಷಕರಿಗೂ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಆಯೋಜಿಸಾಲಾಗಿತ್ತು. ಈ ಕಾರ್ಯಕ್ರಮವನ್ನು 9ನೇ ತರಗತಿಯ ಅನೀಶ್ ಮತ್ತು ಎಂಟನೇ ತರಗತಿಯ ಸ್ಕಂದ ದಿಯಾ ಕಲ್ಲಾಜೆ ನಿರೂಪಿಸಿದರು. ಶಾಲಾ ನಾಯಕ ಅನ್ಸಿಫ್ ಸ್ವಾಗತಿಸಿ, ಶಾಲಾ ನಾಯಕಿ ಫಲಕ್ ಫಾರೂಕ್ ವಂದಿಸಿದರು.  ವಿದ್ಯಾರ್ಥಿಗಳು   ಕ್ರೀಡಾ ಧ್ವಜ ವನ್ನು   ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು .  ದೈಹಿಕ ಶಿಕ್ಷಕರಾದ ಭಾಸ್ಕರ್, ತೀರ್ಥವರ್ಣ, ಸುಪ್ರಿಯ ಮತ್ತು ಆಶಾ ಜ್ಯೋತಿ ಇವರ ನಿರ್ದೇಶನದಂತೆ ಕಾರ್ಯಕ್ರಮ  ನಡೆಯಿತು.



ಈ ಕಾರ್ಯಕ್ರಮದಲ್ಲಿ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್ ಎಸ್, ಅಮರ ಜ್ಯೋತಿ ಪಿಯು ಕಾಲೇಜಿನ ಉಪ ಪ್ರಾಂಶುಪಾಲ ದೀಪಕ್ ವೈ ಆರ್, ಕೆವಿಜಿ ಐಟಿಐ ಕಾಲೇಜಿನ ಪ್ರಾಂಶುಪಾಲ ಚಿದಾನಂದ ಬಾಳಿಲ, ಉಪಪ್ರಾಂಶುಪಾಲ ದಿನೇಶ್ ಮಡ್ತಿಲ, ದೊಡ್ಡಣ್ಣ ಬರೆಮೇಲು, ಡಾ. ಮನೋಜ್, ಪ್ರಸನ್ನ ಕಲ್ಲಾಜೆ, ಮಾಧವ ಬಿ. ಟಿ, ವಸಂತ ಕಿರಿಭಾಗ ಮತ್ತು ಎಲ್ಲಾ ಶಿಕ್ಷಕ ಶಿಕ್ಷಕೇತರ ವೃಂದದವರು , ಪೋಷಕರು ಉಪಸ್ಥಿತರಿದ್ದರು.