ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚೇತನ್ ಮುಂಡೋಡಿ ಪ್ರಥಮ

0

ವೆಸ್ಟೆರ್ನ್ ಇನ್ಸ್ಟಿಟ್ಯೂಟ್ ಆಫ್ ಮಾರ್ಟೀಲ್ ಆರ್ಟ್ಸ್ ಮಂಗಳೂರು ಇವರು ಮಂಗಳೂರಿನ ಜೆಪ್ಪುವಿನಲ್ಲಿ ಆಯೋಜನೆ ಮಾಡಿದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚೇತನ್ ಮುಂಡೋಡಿ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದುಕೊಡಿರುತ್ತಾರೆ.

ಈತ ಜ್ಞಾನದೀಪ ವಿದ್ಯಾ ಸಂಸ್ಥೆಯ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಉದ್ಯಮಿ ಉಮೇಶ್ ಮುಂಡೋಡಿ ಮತ್ತು ಮೀನಾಕ್ಷಿ ಮುಂಡೋಡಿ ದಂಪತಿಗಳ ಪುತ್ರ.

ಕರಾಟೆ ಶಿಕ್ಷಣ ಶಿಕ್ಷಕ ನಾರಾಯಣ ಮಳಿ ಅವರ ಮಾರ್ಗದರ್ಶನದಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.