ಉಮ್ಮರ್ ಎಸ್.ಎಂ. ರಿಗೆ 2ನೇ ಬಾರಿಗೆ ‘ಅಲ್ಡೊ’ದ ಅತ್ಯುತ್ತಮ ಸ್ಟೋರ್ ಮ್ಯಾನೇಜರ್’ ಪ್ರಶಸ್ತಿ

0

ಉಡುಪು ಹಾಗೂ ಪಾದರಕ್ಷೆಗಳ ಪ್ರಖ್ಯಾತ ಅಂತಾರಾಷ್ಟ್ರೀಯ ಬ್ರ್ಯಾಂಡ್ ‘ಆಲ್ಡೊ’ದ, ಯುನೈಟೆಡ್ ಅರಬ್ ಎಮಿರೇಟ್ಸ್ [ಯುಎಇ] ದೇಶದ ಅತ್ಯುತ್ತಮ ಸ್ಟೋರ್ ಮ್ಯಾನೇಜರ್-2023 ಪ್ರಶಸ್ತಿಗೆ ಸುಳ್ಯ ಮೂಲದ ಉಮ್ಮರ್ ಎಸ್ ಎಂ ಅವರು ಪಾತ್ರರಾಗಿದ್ದಾರೆ. ಇದು ಎರಡನೇ ಬಾರಿಗೆ ಉಮ್ಮರ್ ಅವರು ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕಳೆದ ವರ್ಷ ಅತಿಹೆಚ್ಚು ಸೇಲ್ಸ್ ನಡೆಸುವಲ್ಲಿ ಉಮ್ಮರ್ ಅವರ ಕೊಡುಗೆಯನ್ನು ಪರಿಗಣಿಸಿ ʻಆಲ್ಡೊ ʼಸಂಸ್ಥೆಯು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

16 ವರ್ಷಗಳ ಹಿಂದೆ ಯುಎಇಯ ‘ಆಲ್ಡೊ’ ಸಂಸ್ಥೆಯಲ್ಲಿ ಸ್ಪೋರ್ ಕೀಪರ್ ಆಗಿ ಉದ್ಯೋಗಕ್ಕೆ ಸೇರಿದ್ದ ಉಮ್ಮರ್ ಅವರು, ಹಂತ ಹಂತವಾಗಿ ಪರಿಶ್ರಮದಿಂದ ಉದ್ಯೋಗದಲ್ಲಿ ಭಡ್ತಿಯನ್ನು ಪಡೆದು ಇದೀಗ, ಬುರ್ಜ್‌ಮಾನ್‌ ಶಾಪಿಂಗ್ ಮಾಲ್‌ನಲ್ಲಿರುವ ಆಲ್ಡೋದ ಸಹ ಬ್ರ್ಯಾಂಡ್ ʻಸ್ಪ್ರಿಂಗ್ʼನಲ್ಲಿ ಸ್ಟೋರ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸುಳ್ಯದ ಜೂನಿಯರ್ ಕಾಲೇಜು ಬಳಿಯ ನಿವಾಸಿ ದಿ. ಮುಹಮ್ಮದ್ – ಬಿ. ಫಾತಿಮಾ ದಂಪತಿಗಳ ಪುತ್ರರಾಗಿರುವ ಉಮ್ಮರ್ ಎಸ್ಎಂ. ಅವರು ಸದ್ಯ ಕನಕಮಜಲಿನಲ್ಲಿ ವಾಸವಿದ್ದಾರೆ. ಇವರ ಸಹೋದರ ಅಬ್ದುಲ್ ರಝಾಕ್ ಸುಳ್ಯದ ರಥಬೀದಿಯಲ್ಲಿ ನಂದಿನಿ ಕ್ರೀಂ ಪಾರ್ಲರ್ ನಡೆಸುತ್ತಿದ್ದು, ಜಿಲ್ಲಾ ಮಟ್ಟದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ತೃತೀಯ ಮತ್ತು ತಾಲ್ಲೂಕು ಮಟ್ಟದ ನಗರ ಪ್ರದೇಶದ ಅತ್ಯುತ್ತಮ ಡೀಲರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.