ಚುಕ್ರಡ್ಕದಲ್ಲಿ ಬೆಳ್ಳಂಬೆಳಿಗ್ಗೆ ರಸ್ತೆ ದಾಟಿದ ಆನೆ ಹಿಂಡು

0

ಅರಂತೋಡು ಅಡ್ತಲೆ ಮಧ್ಯೆ ಚುಕ್ರಡ್ಕ ಎಂಬಲ್ಲಿ ಕಾಡಾನೆ ಹಿಂಡು ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ರಸ್ತೆ ದಾಟಿ ಆತಂಕ ಸೃಷ್ಟಿಸಿದೆ.

ಈ ಭಾಗದ ಕಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಗಜ ಪಡೆ ಸಂಚಾರ ನಡೆಯುತ್ತಿದ್ದು ಇಂದು ಕೂಡಾ ರಸ್ತೆ ದಾಟಿತು. ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಆತಂಕಕ್ಕೆ ಒಳಗಾದರು. ಶಾಲಾ ಮಕ್ಕಳು ಕೂಡ ಸಂಚಾರ ನಡೆಸುವ ವೇಳೆ ಆದುದರಿಂದ ಸಹಜವಾಗಿ ಈ ಭಾಗದ ಜನ ಆತಂಕಕ್ಕೀಡಾಗಿದ್ದಾರೆ.

ಬೆಳಿಗ್ಗೆ ಸುಳ್ಯಕ್ಕೆ ಬರುವ ವೇಳೆ ಎರಡು ಮೂರು ಆನೆಗಳು ರಸ್ತೆ ದಾಟುತ್ತಿರುವುದನ್ನು ನೋಡಿದೆ. ನನಗಿಂತ ಮುಂದೆ ಇದ್ದ ವಾಹನದವರು ಆರೇಳು ಆನೆಗಳನ್ನು ನೋಡಿದ್ದಾರೆ ಎಂದು ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರು ಸುದ್ದಿಗೆ ತಿಳಿಸಿದ್ದಾರೆ.