ಸೋಣಂಗೇರಿ ಶಾಲಾ ವಾರ್ಷಿಕೋತ್ಸವದ ಲೆಕ್ಕ ಪತ್ರ ಮಂಡನೆ ಮತ್ತು ಅಭಿನಂದನಾ ಕಾರ್ಯಕ್ರಮ

0

ಜಾಲ್ಸೂರು ಗ್ರಾಮದ ಸ.ಉ.ಹಿ.ಪ್ರಾಥಮಿಕ ಶಾಲೆ ಸೋಣಂಗೇರಿ ಇದರ ವಾರ್ಷಿಕೋತ್ಸವ ಕಾರ್ಯಕ್ರಮದ ಲೆಕ್ಕ ಪತ್ರ ಮಂಡನೆ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಜ.೧೨ ರಂದು ಶಾಲಾ ಸಭಾಭವನದಲ್ಲಿ ನಡೆಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕುಸುಮಾವತಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ವಾರ್ಷಿಕೋತ್ಸವದ ಖರ್ಚು ವೆಚ್ಚಗಳನ್ನು ಮಂಡನೆ ಮಾಡಿದರು.
ಎಸ್ ಡಿ ಎಂ ಸಿ ಉಪಾಧ್ಯಕ್ಷ ಚಿದಾನಂದ ಕುಕ್ಕನ್ನೂರುರವರು ಅಭಿನಂದನಾ ಮಾತುಗಳನ್ನು ಮಾತನಾಡಿದರು.


ವೇದಿಕೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷೆ ಶ್ರೀಮತಿ ಪ್ರೇಮಾ ಸುರೇಶ್ ರೈ, ಉಪಾಧ್ಯಕ್ಷ ಚಿದಾನಂದ ಕುಕ್ಕನ್ನೂರು, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಪ್ರಭಾಕರ ರೈ ಕೊಯಿಂಗೋಡಿಮೂಲೆ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶ್ರೀಮತಿ ದೀಪ ಅಜಕಲಮೂಲೆ, ಶ್ರೀಮತಿ ಅಂಬಿಕಾ ಕುಕ್ಕಂದೂರು, ಈಶ್ವರ ನಾಯಕ್ ಸೋಣಂಗೇರಿ, ನಿವೃತ್ತ ಶಿಕ್ಷಕ ಅರುಳಪ್ಪನ್ ಕುಕ್ಕಂದೂರು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲೆ ಶ್ರೀಮತಿ ತಂಗಮ್ಮ ಮಹಾಬಲಗೌಡ ಕೆಳಗಿನಮನೆ, ಸಾಂತಪ್ಪ ಗೌಡ ಮೋಂಟಡ್ಕ, ಗೌರಿಶಂಕರ ನಿವೃತ್ತ ಪ್ರಾಂಶುಪಾಲರು ಕಾವೇರಿ ಪಾಲಿಟೆಕ್ನಿಕ್ ಕಾಲೇಜು ಗೋಣಿಕೊಪ್ಪ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಭಾಸ್ಕರ ಗೌಡ ಹೊಸಗದ್ದೆ, ಹಿರಿಯರಾದ ಗೋಪಾಲಕೃಷ್ಣ ಗೌಡ ಸುತ್ತುಕೋಟೆ, ಶೇಷಪ್ಪ ಪೂಜಾರಿ ಸೋಣಂಗೇರಿ ಉಪಸ್ಥಿತರಿದ್ದು, ಮಾತನಾಡಿದರು.
ಸಾಮಾಜಿಕ ಹೋರಾಟಗಾರ ಸತ್ಯ ಶಾಂತಿ ತ್ಯಾಗ ಮೂರ್ತಿ ಕುಕ್ಕನ್ನೂರುರವರು ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಸಂಖ್ಯೆ ಹೆಚ್ಚು ಮಾಡುವ ಕುರಿತು ಮಾತನಾಡಿದತು.


ಮಕ್ಕಳ ಪೋಷಕರು, ಎಸ್ ಡಿ ಎಂ ಸಿ, ಸದಸ್ಯರುಗಳು, ಹಿರಿಯ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ವಿವಿಧ ಸಂಘಗಳ ಸದಸ್ಯರುಗಳು, ಶಾಲಾ ಸಹಶಿಕ್ಷಕಿಯರು ಉಪಸ್ಥಿತರಿದ್ದರು. ಸಹಶಿಕ್ಷಕಿ ಶ್ರೀಮತಿ ಸವಿತಾ ಯು.ಆರ್. ಧನ್ಯವಾದ ಗೈದರು.