ಗುತ್ತಿಗಾರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿಯ ಮಕ್ಕಳ ಪೋಷಕರ ಸಭೆ ಇಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಗುತ್ತಿಗಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರ ಮೂಕಮಲೆ ವಹಿಸಿದ್ದರು.
ಕರ್ನಾಟಕ ಸರಕಾರ ಶಿಕ್ಷಣ ಇಲಾಖೆ ಮುಖಾಂತರ ಐದನೇ ತರಗತಿಯ ಮಕ್ಕಳಿಗೆ ರಾಜ್ಯಮಟ್ಟದ ಮೌಲ್ಯಾಂಕನ ಪರೀಕ್ಷೆ ಮಾರ್ಚ್ ತಿಂಗಳಿನಲ್ಲಿ ನಡೆಸಲಿದ್ದು, ಪರೀಕ್ಷೆಯ ಪೂರ್ವ ತಯಾರಿ ಬಗ್ಗೆ ಮಕ್ಕಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೋಷಕರ ಸಭೆ ನಡೆಸಲಾಯಿತು. ಮುಖ್ಯವಾಗಿ ಮಕ್ಕಳಲ್ಲಿ ಮೊಬೈಲ್ ಬಳಕೆ ಕಡಿಮೆ ಮಾಡುವ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಉಮಾವತಿಯವರು ಪೋಷಕರಿಗೆ ತಿಳಿಸಿಕೊಟ್ಟರು.
ಶೈಕ್ಷಣಿಕ ವಿಚಾರಗಳಿಗೆ ಸಂಬಂಧಪಟ್ಟಂತೆ ಮಾತ್ರ ಮೊಬೈಲ್ ಬಳಕೆ ಮಾಡುವಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಮತ್ತು ಮಕ್ಕಳ ಎಲ್ಲಾ ಚಲನವಲಗಳ ಬಗ್ಗೆ ಪೋಷಕರು ಸೂಕ್ಷ್ಮವಾಗಿ ಗಮನ ಹರಿಸಬೇಕು ಎಂದು ಹೇಳಿದರು . ಹಾಗೂ ಶಾಲೆಯು ಪಿಎಂಶ್ರೀ ಯೋಜನೆಗೆ ಆಯ್ಕೆಯಾಗಿದ್ದು ಕೇಂದ್ರ ಸರಕಾರದ ಅನುದಾನಗಳು ಹಂತ ಹಂತವಾಗಿ ಬರುತ್ತಿದ್ದು, ಅದರ ಬಳಕೆಯ ಬಗ್ಗೆ ಕೂಡ ಸಂಕ್ಷಿಪ್ತವಾಗಿ ವಿವರಿಸಿದರು.
ವೇದಿಕೆಯಲ್ಲಿ ಸಹ ಶಿಕ್ಷಕ ಕುಶಾಲಪ್ಪ ಗೌಡ ತುಂಬತ್ತಾಜೆ ಉಪಸ್ಥಿತರಿದ್ದರು.
ಮಕ್ಕಳ ಪೋಷಕರು, ಶಿಕ್ಷಕರು, ಶಾಲಾ ಎಸ್‌ಡಿಎಂಸಿ ಸದಸ್ಯರುಗಳು ಉಪಸ್ಥಿತರಿದ್ದರು. ಸಹಸಿಕ್ಷಕಿ ಶ್ರೀಮತಿ ಪೂರ್ಣಿಮಾ ಸ್ವಾಗತಿಸಿ, ಸಹಶಿಕ್ಷಕಿ ಚೈತ್ರ ವಂದಿಸಿದರು. (ಚಿತ್ರವರದಿ:ಡಿಹೆಚ್.)