ಪಂಜ ಲಯನ್ಸ್ ಕ್ಲಬ್ ವತಿಯಿಂದ ಸರ್ಕಾರಿ ಶಾಲೆಗೆ ಕೊಡುಗೆ

0

  ಲಯನ್ಸ್ ಕ್ಲಬ್ ಪಂಜ ಇದರ ಪ್ರಾಯೋಜಕತ್ವದಲ್ಲಿ ಲಯನ್ ವಾಸುದೇವ ಮೇಲ್ಪಾಡಿ ದಂಪತಿಗಳು ದ.ಕ. ಜಿ. ಪ. ಹಿ. ಪ್ರಾ

ಶಾಲೆ ಕುಂತೂರು ಪದವು ಶಾಲೆಗೆ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಶಾಲಾ ಗೋಡೆಗೆ ವರ್ಲಿ ಚಿತ್ರ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ರಚಿಸಲು ಕ್ಲಬ್ ವತಿಯಿಂದ ಸಹಾಯಧನವನ್ನು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಗಿರಿಜಾ ಇವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಲಯನ್ಸ್ ಅಧ್ಯಕ್ಷರಾದ ಲ.ದಿಲೀಪ್ ಬಾಬ್ಲು ಬೆಟ್ಟು ಲ.ವಾಸುದೇವ ಮೆಲ್ಪಾಡಿ,ಶ್ರೀಮತಿ ವಿಜಯ ಕುಮಾರಿ ವಾಸುದೇವ,ಶಾಲಾ ಶಿಕ್ಷಕರಾಗಿರುವ ಕೇಶವ ಕೆ, ಶಿವಣ್ಣ, ಕುಸುಮಾವತಿ, ಗಾಯತ್ರಿ ,ಚಿತ್ರಕಲಾ ಶಿಕ್ಷಕರಾದ ಕಿಶೋರ್ ಕುಮಾರ್, ಹಿಂದಿ ಶಿಕ್ಷಕಿ ವಿಜಯ ಕುಮಾರಿ, ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.