ಬಾಳಿಲದ ವಾಲ್ಮೀಕಿ ಆಶ್ರಮ ಶಾಲೆಯ ನೂತನ ಕಟ್ಟಡ ಹಾಗೂ ಪರಿಶಿಷ್ಟ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ಉದ್ಘಾಟಿಸಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸುಳ್ಯ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದೊಂದಿಗೆ ಬಾಳಿಲ ವಾಲ್ಮೀಕಿ ಆಶ್ರಮಶಾಲೆ ಹಾಗೂ ಪರಿಶಿಷ್ಟ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಉದ್ಘಾಟನೆ ಹಾಗೂ ಸುಬ್ರಹ್ಮಣ್ಯ ವಾಲ್ಮೀಕಿ ಆಶ್ರಮಶಾಲೆಯ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮ ಹಾಗೂ ಇತರ ಅಭಿವೃದ್ಧಿ ಕೆಲಸಗಳನ್ನು ಸುಳ್ಯ ಪುರಭವನದಲ್ಲಿ ಸಚಿವರು
ಉದ್ಘಾಟಿಸಿದ್ದರು.
ಬೆಳಿಗ್ಗೆ ಸಚಿವರು ಬಾಳಿಲಕ್ಕೆ ಆಗಮಿಸಲಿದ್ದಾರೆ ಎಂದು
ಸಾರ್ವಜನಿಕರು ಮತ್ತಿತರರು ಕಾದಿದ್ದರು. ಜನತಾ ದರ್ಶನಕ್ಕೆ
ತಡ ಆಗುತ್ತದೆ ಎಂದು ಸಚಿವರು ನೇರವಾಗಿ ಸುಳ್ಯಕ್ಕೆ ಆಗಮಿಸಿ
ಸುಳ್ಯದಲ್ಲಿ ಉದ್ಘಾಟನೆ ನೆರವೇರಿಸಿದ್ದರು. ಸಚಿವರು ಬಾಳಿಲಕ್ಕೆ ಆಗಮಿಸಬೇಕು ಎಂದು ಸಾರ್ವಜನನಿಕರಿಂದ ಬೇಡಿಕೆ ಕೇಳಿ
ಬಂದಿತ್ತು. ಈ ಹಿನ್ನಲೆಯಲ್ಲಿ ಸಂಜೆ ಬಾಳಿಲಕ್ಕೆ ತೆರಳಿ ಕಟ್ಟಡವನ್ನು
ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿ ತೆರಳಿದರು.
ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ, ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್, ಕಾಂಗ್ರೆಸ್ ಮುಖಂಡರಾದ ಡಾ.ಕೆ.ಇ.ರಾಧಾಕೃಷ್ಣ, ಡಾ.ಬಿ.ರಘು, ಸದಾನಂದ ಮಾವಜಿ,ಚಂದ್ರಶೇಖರ ಕಾಮತ್, ರಾಜೀವಿ ಆರ್ ರೈ, ಸರಸ್ವತಿ ಕಾಮತ್, ವಹೀದಾ ಇಸ್ಮಾಯಿಲ್, ಗಫೂರ್ ಕಲ್ಮಡ್ಕ, ಇಸ್ಮಾಯಿಲ್ ಪಡ್ಡಿನಂಗಡಿ, ಕಳಂಜ ವಿಶ್ವನಾಥ ರೈ, ಸಿದ್ದಿಕ್ ಕೊಕ್ಕೊ, ಪ್ರವೀಣ ಮರುವಂಜ,ಶೇಖರ ಕೆ.ಪಿ,ಗಂಗಾಧರ ಕಾಯರ,ಆದಂ ಸಾಹೆಬ್,ಕಾವಿನಮೂಲೆ ಸುಬ್ರಹ್ಮಣ್ಯ,ಹರೀಶ್ ರೈ ದೇರಂಪಾಲು, ಶಾಲಾ ಮೇಲ್ವಿಚಾರಕ ಮಾಧವ ಕೆ.,ಮತ್ತಿತರರು ಉಪಸ್ಥಿತರಿದ್ದರು.