ಆಲೆಟ್ಟಿಸ.ಹಿ.ಪ್ರಾ.ಶಾಲೆಯಲ್ಲಿ 75 ನೇ ಗಣರಾಜ್ಯೋತ್ಸವ ಆಚರಣೆಯ ಧ್ವಜಾರೋಹಣ

0

ಆಲೆಟ್ಟಿ ದ.ಕ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾರ್ಕೋಡಿನಲ್ಲಿ 75 ನೇ ಗಣರಾಜ್ಯೋತ್ಸವ ಆಚರಣೆಯ ಪ್ರಯುಕ್ತ ಬೆಳಗ್ಗೆ ಧ್ವಜಾರೋಹಣ ನೆರವೇರಿತು.
ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಹುಕ್ರಪ್ಪ ಪೂಜಾರಿ ಕುದ್ಕುಳಿ ಧ್ವಜಾರೋಹಣ ನೆರವೇರಿಸಿದರು.


ಈ ಸಂದರ್ಭದಲ್ಲಿ
ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಆನಂದ ಅಡ್ಪಂಗಾಯ, ನಿವೃತ್ತ ಮುಖ್ಯ ಶಿಕ್ಷಕ ವೇಣುಗೋಪಾಲ ಕೊಯಿಂಗಾಜೆ, ಗಿರೀಶ್ ನಾರ್ಕೋಡು, ಪಂ.ಸದಸ್ಯ ಚಂದ್ರಕಾಂತನಾರ್ಕೋಡು, ಹರಿಶ್ಚಂದ್ರ ಆಲೆಟ್ಟಿ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಸುನಂದ ರವರು ಸ್ವಾಗತಿಸಿದರು. ಎಸ್.ಡಿ.ಎಂ.ಸಿ.ಸದಸ್ಯರು ಹಾಗೂ ಪೋಷಕರು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು‌ ಭಾಗವಹಿಸಿದರು.