ಎಲಿಮಲೆ ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ರೂಬಿ ಜ್ಯುಬಿಲಿ

0

ನೂತನ ಕಚೇರಿ, ದಾಸ್ತಾನು ಕೊಠಡಿ ಉದ್ಘಾಟನೆ

ಪ್ರತಿಯೊಬ್ಬ ವ್ಯಕ್ತಿಯು ಅವರವರ ಧರ್ಮಗ್ರಂಥದ ಸಾರವನ್ನು ಅರಿತು ಬಾಳಿದರೆ ಕೆಡುಕು ಮುಕ್ತ ಸಮಾಜ ನಿರ್ಮಿಸಲು ಸಾಧ್ಯ: ಅಬ್ದುಲ್ ಅಜೀಂ

ಇತ್ತೀಚಿನ ಕಾಲದಲ್ಲಿ ಮನುಷ್ಯರು ಜೀವನದ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡುವುದು ಇನ್ನಿತರ ಸಮಸ್ಯೆಗಳನ್ನು ಉಂಟುಮಾಡುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ ಇದಕ್ಕೆಲ್ಲ ಪರಿಹಾರ ದೊರಕಬೇಕಾಗದರೆ ಮಾನವರು ಯಾವುದೇ ಜಾತಿಯಾಗಲಿ ಧರ್ಮವಾಗಲಿ ಅವರವರ ಧರ್ಮದ ಪರಿಶುದ್ಧ ಗ್ರಂಥದ ಸಾರವನ್ನು ಅನುಸರಿಸಿ ಜೀವಿಸಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣಕ್ಕೆ ಸಾಧ್ಯ ಮಾನವ ಜನ್ಮ ಶ್ರೇಷ್ಠವಾದುದು. ಅದನ್ನು ಅರ್ಥ ಮಾಡಿಕೊಂಡು ನಾವೆಲ್ಲರೂ ಮಾನವರು ಒಂದೇ ಎಂಬ ಭಾವನೆ ಮೂಡಿದರೆ ನಮ್ಮಲ್ಲಿ ಪ್ರೀತಿ, ವಿಶ್ವಾಸ ಮತ್ತು ಸ್ನೇಹ ಬೆಳೆಯಲು ಸಾಧ್ಯ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಹೇಳಿದ್ದಾರೆ.
ಎಲಿಮಲೆಯ ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ಇದರ ರೂಬಿ ಜ್ಯುಬಿಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಂಸ್ಥೆಯ ನೂತನ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಎಂಬುದು ಶಾಂತಿ ಮತ್ತು ಸೌಹಾರ್ದತೆಯ ಸುರಕ್ಷತೆಯ ನೆಲೆವೀಡು ವಿಶ್ವಕ್ಕೆ ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ಸಾರಿದ ದೇಶ ನಮ್ಮ ಭಾರತ ಇಲ್ಲಿ ಎಲ್ಲರಲ್ಲಿಯೂ ಧಾರ್ಮಿಕ ಭಾವನೆ ಗಟ್ಟಿಯಾಗಿರುವ ಕಾರಣ ನಮ್ಮ ದೇಶ ವಿಶ್ವಕ್ಕೇ ಮಾದರಿಯಾಗಿದೆ. ನಮ್ಮ ಧರ್ಮವನ್ನೂ, ಧರ್ಮದ ಧಾರ್ಮಿಕ ಆಚರಣೆ,ಧರ್ಮದ ಆಚಾರ ವಿಚಾರ ಗಳನ್ನು ಕಳಿತು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡರೆ ನಿಜವಾದ ಮಾನವರಾಗುತ್ತೇವೆ. ಆದುದರಿಂದ ಎಲ್ಲಾ ಧರ್ಮಗಳೂ ಸೌಹಾರ್ದತೆಯಿಂದ ಬದುಕಬೇಕು ಎಂದು
ಕುಂಬ್ರ ಮರ್ಕಝುಲ್ ಹುದಾ ಇದರ ಉಪಾಧ್ಯಕ್ಷ ಡಾ. ಎಮ್ಮೆಸ್ಸೆಂ ಅಬ್ದುಲ್ ರಸೀದ್ ಝೈನಿ ಅಲ್ ಕಾಮಿಲ್ ಸಂದೇಶ ಭಾಷಣ ಮಾಡಿದರು.

ಸೌಹಾರ್ದತೆ ಮತ್ತು ಸಹಬಾಳ್ವೆಯಿಂದ ಬಾಳಿದರೆ ನಾಡಿನ ಅಭಿವೃದ್ಧಿ ಸಾಧ್ಯ ಎಂದು ಎಲಿಮಲೆ ಬದ್ರಿಯಾ ಜಮಾಅತ್‌ನ ಅಧ್ಯಕ್ಷ ಮಹಮ್ಮದ್ ಇಕ್ಬಾಲ್‌ ಎಲಿಮಲೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸುಳ್ಯ ಎಸ್‌ಜೆಯು ಅಧ್ಯಕ್ಷ ಸಯ್ಯದ್ ಕುಂಞಿಕೋಯ ತಂಙಳ್ ಸ‌ಅದಿ ದುವಾ ನೆರವೇರಿಸಿದರು.


ಸುಳ್ಯ ತಾ.ಪಂ ನಿವೃತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಜೀಬುಲ್ಲಾ ಜಫಾರಿ,
ದೇವಚಳ್ಳ ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಅಧ್ಯಕ್ಷ ಧನಂಜಯ ಕುಮಾರ್.ಕೆ,
ವಕ್ಫ್ ಅಧಿಕಾರಿ ಅಬೂಬಕ್ಕರ್, ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಮೀಪ್ ಉಪಾಧ್ಯಕ್ಷ ಕೆ.ಎಂ.ಮುಸ್ತಫ, ನ.ಪಂ.ಮಾಜಿ ‌ಅಧ್ಯಕ್ಷ ಎಸ್.ಸಂಶುದ್ದೀನ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಎಂ.ಬಿ.ಪೌಂಢೇಷನ್ ಅಧ್ಯಕ್ಷ ಎಂ.ಬಿ.ಸದಾಶಿವ, ಜಿಲ್ಲಾ ಪಂಚಾಯತ್ ಮಾಜಿ‌‌ ಸದಸ್ಯರಾದ ಭರತ್ ಮುಂಡೋಡಿ, ಸಯ್ಯದ್ ಮೀರಾ ಸಾಹೇಬ್ ಕಡಬ, ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ‌ ಸಹಕಾರಿ‌ ಸಂಘದ ಅಧ್ಯಕ್ಷ ವಿಷ್ಣು ಭಟ್‌ ಮೂಲೆತೋಟ,ಜಾವಗಲ್ ದರ್ಗಾ ಶರೀಫ್ ಅಧ್ಯಕ್ಷ ಇಸಾಕ್ ಸಾಹೇಬ್ ಪಾಜಪಳ್ಳ,


ನ.ಪಂ.ಸದಸ್ಯರಾದ ಕೆ.ಎಸ್.ಉಮ್ಮರ್, ಶರೀಫ್‌ ಕಂಠಿ, ರಿಯಾಝ್ ಕಟ್ಟೆಕಾರ್,
ಪ್ರಮುಖರಾದ ಆದಂ ಹಾಜಿ ಕಮ್ಮಾಡಿ, ಕೆ.ಪಿ.ಜಾನಿ ಕಲ್ಲುಗುಂಡಿ, ರಝಾಕ್ ಹಾಜಿ ರಾಜಧಾನಿ, ಜಲೀಲ್ ಬೈತ್ತಡ್ಕ, ಎಂ.ಎ.ಜೋಸೆಫ್, ಆಲಿ.ಟಿ.ಎಸ್, ಗ್ರಾ.ಪಂ.ಸದಸ್ಯ ವೇಣುಗೋಪಾಲ ಪುನ್ಕುಟ್ಟಿ, ಶಿಕ್ಷಕರಾದ ಗೋಪಿನಾಥ ಮೆತ್ತಡ್ಕ, ಶ್ರೀಧರ ಗೌಡ, ಜಯಾನಂದ‌ ಪಟ್ಟೆ
ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಲತೀಫ್ ಹರ್ಲಡ್ಕ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ಕಾರ್ಯದರ್ಶಿ ಸೂಫಿ ಎಲಿಮಲೆ ಸ್ವಾಗತಿಸಿದರು. ಅಬ್ದುಲ್ಲಾ ಹಿಮಮಿ ಸಖಾಫಿ, ಮಹಮ್ಮದ್ ಸಖಾಫಿ ಹಾಗೂ ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

ಸಾಧಕರಿಗೆ ಮತ್ತು ಯೋದರಿಗೆ
ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ ಸಂಸ್ಥೆಯಲ್ಲಿ ನಲವತ್ತು ವರ್ಷಗಳಲ್ಲಿ ಹಲವಾರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು ಸೇವೆ ಸಲ್ಲಿಸಿದ ಎಲ್ಲಾ ಅಧ್ಯಕ್ಷರು ಗಳನ್ನು ಸನ್ಮಾನಿಸಿ ಗೌರವಿಸಿದರು.ಎಲಿಮಲೆ ವ್ಯಾಪ್ತಿಯಲ್ಲಿ ಇರುವ ಭಾರತ ದೇಶದ ರಕ್ಷಣಾ ಕಾರ್ಯದಲ್ಲಿ ಸೇವೆ ನಿರತ ಸೈನಿಕರನ್ನು, ಎಲಿಮಲೆ ಪರಿಸರದಲ್ಲಿರುವ ಉತ್ತಮ ಶಿಕ್ಷಕರನ್ನು ,ಸಮಾಜಸೇವಾಕರನ್ನು ಗೌರವಿಸಿ ಸನ್ಮಾನಿಸಲಾಯಿತು.


ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ ನಲ್ಲಿ ಹತ್ತು ವರ್ಷಗಳ ಕಾಲ ಅಧ್ಯಕ್ಷರಾಗಿದ್ದು ರೂಬಿ ಜುಬಿಲಿ ಸಂದರ್ಭದಲ್ಲಿಯೂ ಅಧ್ಯಕ್ಷರಾಗಿ ಸೇವೆಸಲ್ಲಿಸಿದ ಅಬ್ದುಲ್ ಲತೀಫ್ ಹರ್ಲಡ್ಕ ನುಸ್ರತ್ ಪ್ರಧಾನ ಕಾರ್ಯದರ್ಶಿಯಾಗಿ ಹದಿಮೂರು ವರ್ಷ ಸೇವೆಸಲ್ಲಿಸಿ ರೂಬಿ ಜುಬಿಲಿ ಸಂದರ್ಭದಲ್ಲಿಯೂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಸೂಫಿ ಎಲಿಮಲೆ ಯವರನ್ನು ಹಾಗೂ ಜಮಾಯತ್ ಅಧ್ಯಕ್ಷರಾಗಿ ರೂಬಿ ಜುಬಿಲಿ ಯಶಸ್ವಿಗೆ ಸಹಕರಿಸಿದ ಇಕ್ಬಾಲ್ ಎಲಿಮಲೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ಅಬ್ದುಲ್ ರಜಾಕ್ ಅಬ್ರಾರಿ ಪತ್ತನಂತಿಟ್ಟ ಧಾರ್ಮಿಕ ಮತಪ್ರವಚನ ಮಾಡಿರು.
ಸಯ್ಯದ್ ಉಮ್ಮರ್ ಜಿಫ್ರಿ ತಂಙಳ್ ಮಲಪುರಂ ದುವಾಶಿರ್ವಚನ ಮಾಡಿದರು.


ಈ ಸಂದರ್ಭದಲ್ಲಿ ಎಲಿಮಲೆ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಮೂಸಾ ಹಾಜಿ ಎಲಿಮಲೆ,ಎಲಿಮಲೆ ಜುಮ್ಮಾ ಮಸೀದಿ ಮದರಿಸ್ ತಂಙಳ್,ಜಿರ್ಮುಖಿ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ಲಾ ಜಿ.ಎಸ್, ಮೊದಲಾದವರು ಉಪಸ್ಥಿತರಿದ್ದರು.