ಸಂಪಾಜೆ ಗ್ರಾ.ಪಂ.ನಲ್ಲಿ ವಿವಿಧ ಕೊಡುಗೆಗಳ ಉದ್ಘಾಟನೆ

0

ಸಂಪಾಜೆ ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆ ತಾಲೂಕು ಪಂಚಾಯತ್ ವತಿಯಿಂದ ನೀಡಿದ ೨ ಲ್ಯಾಪ್ಟಾಪ್, ೧ ಕಂಪ್ಯೂಟರ್, ಟ್ಯಾಬ್, ಮೊಬೈಲ್, ೧೩ ಚಯರ್, ಕವಾಟು ಉದ್ಘಾಟನೆ ಕಾರ್ಯಕ್ರಮ ಗ್ರಂಥಾಲಯದಲ್ಲಿ ನಡೆಯಿತು.ಲ್ಯಾಪ್ ಟಾಪ್ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು ನೆರವೇರಿಸಿದರು. ಕಂಪ್ಯೂಟರ್ ಗೆ ಪಂಚಾಯತ್ ಅಭಿವೃದ್ಧಿ ಅದಿಕಾರಿ ಉದ್ಘಾಟನೆ ಮಾಡಿ ತರಿಸುವಲ್ಲಿ ಪ್ರಯತ್ನ ಪಟ್ಟ ಮಾಜಿ ಅಧ್ಯಕ್ಷರಾಡ ಜಿ. ಕೆ. ಹಮೀದ್ ಗೂನಡ್ಕ ಹಾಗೂ ಉಪಾಧ್ಯಕ್ಷರಾದ ಎಸ್. ಕೆ. ಹನೀಫ್‌ರವರಿಗೆ ಅಭಿನಂದನೆ ಸಲ್ಲಿಸಿದರು. ಉಪಾಧ್ಯಕ್ಷರಾದ ಎಸ್.ಕೆ.ಹನೀಫ್ ಗ್ರಂಥಾಲಯ ಮೊಬೈಲ್ ಉದ್ಘಾಟನೆ ಮಾಡಿದರು.

ಮಾಜಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಟ್ಯಾಬ್ ಉದ್ಘಾಟನೆ ಮಾಡಿದರು.ಈ ಎಲ್ಲಾ ಸವಲತ್ತು ದೊರಕಿಸುವಲ್ಲಿ ಸಹಕರಿಸಿದ ತಾಲೂಕು ಆಡಳಿತಾಧಿಕಾರಿ ಅಭಿಷೇಕ್, ಕಾರ್ಯ ನಿರ್ವಾಹಕ ಅಧಿಕಾರಿ ರಾಜಣ್ಣ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ. ಎಂ. ಶಾಹಿದ್ ತೆಕ್ಕಿಲ್ ರವರಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಸುಂದರಿ ಮುಂಡಡ್ಕ, ಸದಸ್ಯರಾದ ವಿಮಲಾ ಪ್ರಸಾದ್, ಲಿಸ್ಸಿ ಮೊನಾಲಿಸಾ, ಕಾರ್ಯದರ್ಶಿ ಪದ್ಮಾವತಿ ಸಾಮಾಜಿಕ ಲೆಕ್ಕ ಪರಿಶೀಲನೆ ಸಂಯೋಜಕರಾದ ಸೌಮ್ಯ ಉಪಸ್ಥಿತರಿದ್ದರು.