ರಾಷ್ಟ್ರ ಮಟ್ಟದ ಯೋಗಾಸನದಲ್ಲಿ ಸುಭಿಕ್ಷಾ ಬಾಲಾಡಿ ತೃತೀಯ ಸ್ಥಾನ

0

ಯೋಗಾಸನ ಸ್ಪೋರ್ಟ್ಸ್ ಫೆಡರೇಶನ್ ಆಫ್ ಇಂಡಿಯಾ ಇವರು ಜನವರಿಯಲ್ಲಿ ಆನ್ಲೈನ್ ಮೂಲಕ ನಡೆಸಿದ 15ನೇ ಮುಕ್ತ ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್ ಶಿಪ್ -2024ರಲ್ಲಿ 08ವರ್ಷದ ಒಳಗಿನ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಸುಭಿಕ್ಷಾ ಬಾಲಾಡಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ನಿರಂತರ ಯೋಗ ಕೇಂದ್ರ ಏನೇಕಲ್ಲು ಇಲ್ಲಿಯ ವಿದ್ಯಾರ್ಥಿನಿಯಾಗಿರು ಸುಭಿಕ್ಷಾ ಬಾಲಾಡಿ ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ರವರಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ.

ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯದಲ್ಲಿ 01ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ಯೇನೆಕಲ್ಲು ಗ್ರಾಮದ ಬಾಲಾಡಿ ಸುರೇಶ ಬಾಲಾಡಿ ಮತ್ತು ಶ್ರೀಮತಿ ಸುಲಕ್ಷ ಬಾಲಾಡಿ ರವರ ಪುತ್ರಿ