ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ 2019-24ನೇ ಸಾಲಿನ ವೈದ್ಯಕೀಯ ಪದವಿಯ ರ್ಯಾಂಕ್ ಪಟ್ಟಿಯನ್ನು ಪ್ರಕಟಿಸಿದ್ದು, ಶ್ರದ್ಧಾ ಕೊಡಪಾಲ ಬಿಎಸ್.ಸಿ ನರ್ಸಿಂಗ್ ನ 3 ವಿಷಯಗಳಲ್ಲಿ 6ನೇ ಮತ್ತು 9ನೇ ರ್ಯಾಂಕ್ ಪಡೆದುಕೊಂಡಿದ್ದಾಳೆ.
ಪ್ರಥಮ ವರ್ಷದ ಸೂಕ್ಷ್ಮ ಜೀವ ವಿಜ್ಞಾನದಲ್ಲಿ 9ನೇ ರ್ಯಾಂಕ್,
ದ್ವಿತೀಯ ವರ್ಷದ
ಸಮುದಾಯ ಆರೋಗ್ಯ ಶುಶ್ರೂಷೆ ವಿಭಾಗದಲ್ಲಿ 6ನೇ ರ್ಯಾಂಕ್ ಹಾಗೂ ಸಂವಹನ ಶಿಕ್ಷಣ ತಂತ್ರಜ್ಞಾನ ವಿಭಾಗದಲ್ಲಿ 9ನೇ ರ್ಯಾಂಕ್ ಪಡೆದಿರುತ್ತಾಳೆ.
ಈಕೆ ನೆಲ್ಲೂರು ಕೆಮ್ರಾಜೆ ಗ್ರಾಮದ ಕೊಡಪಾಲ, ಬೊಳ್ಳಾಜೆ ಶಾಖೆಯ ಅಂಚೆ ಪಾಲಕ ಕೇಶವ ಬಾಳೆಗುಂಡಿ ಹಾಗೂ ಶ್ರೀಮತಿ ನಳಿನಿ ದಂಪತಿಗಳ ಪುತ್ರಿ.
ಬಿಎಸ್ಸಿ ನರ್ಸಿಂಗ್ ಪದವಿಯನ್ನು
ಸುಬ್ಬಯ್ಯ ನರ್ಸಿಂಗ್ ಕಾಲೇಜು ಶಿವಮೊಗ್ಗದಲ್ಲಿ ಪೂರೈಸಿ,
ಪ್ರಸ್ತುತ ಮಂಗಳೂರಿನ ಶ್ರೀದೇವಿ ನರ್ಸಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ.