ಕಂದ್ರಪ್ಪಾಡಿ ಶಾಲೆಗೆ ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ದಿಂದ ಪ್ಲೇ ಹೋಮ್ ಕೊಡುಗೆ

0

ಸ.ಹಿ.ಪ್ರಾ. ಶಾಲೆ, ಕಂದ್ರಪ್ಪಾಡಿ ಶಾಲೆಯು ಶತಮಾನೋತ್ಸವ ಆಚರಿಸಿಕೊಂಡ ಹಿನ್ನೆಲೆಯಲ್ಲಿ ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ಶಾಲಾ ಮಕ್ಕಳಿಗೆ ಪ್ಲೇ ಹೋಮ್ (ಆಟದ ಮನೆ) ನಿರ್ಮಾಣಕ್ಕೆ ರೂ. 40,000/-ಚೆಕ್ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲ.ರಾಮಚಂದ್ರ ಪಳಂಗಾಯ MJF ವಹಿಸಿದ್ದರು. ವೇದಿಕೆಯಲ್ಲಿ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ , ಲಯನ್ಸ್ ಕ್ಲಬ್ ಕೋಶಾಧಿಕಾರಿಯಾದ ಲ. ಚಂದ್ರಶೇಖರ ಪಾನತ್ತಿಲ, ಎಸ್ .ಡಿ .ಎಂ. ಸಿ ಅಧ್ಯಕ್ಷರಾದ ಚಂದ್ರಶೇಖರ ಕಂದ್ರಪ್ಪಾಡಿ, ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಮಣ್ಯದ ಸ್ಥಾಪಕಾಧ್ಯಕ್ಷರಾದ ಲ.ರಂಗಯ್ಯ ಶೆಟ್ಟಿಗಾರ್ ನಿವೃತ್ತ ಪ್ರಾಂಶುಪಾಲರು ಕೆ. ಎಸ್. ಎಸ್ ಕಾಲೇಜು ಸುಬ್ರಮಣ್ಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಕೇಶ್ ರಾಜ ಹಿರಿಯಡ್ಕ, ಶಾಲಾ ಮುಖ್ಯೋಪಾಧ್ಯಾಯರಾದ ವಾಣಿ. ಕೆ.ಎಸ್ ಉಪಸ್ಥಿತರಿದ್ದರು . ಲ. ರಂಗಯ್ಯ ಶೆಟ್ಟಿಗಾರ್ ರವರು ಪ್ರಾಸ್ತವಿಕ ಮಾತುಗಳನ್ನಾಡಿ ಲಯನ್ಸ್ ಕ್ಲಬ್ ಸುಬ್ರಮಣ್ಯ ವತಿಯಿಂದ ನಡೆಯುತ್ತಿರುವ ಸಮಾಜಮುಖಿ ಕಾರ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿಯವರು, ಶಾಲಾ ಎಸ್‌.ಡಿ.ಎಂ.ಸಿ ಅಧ್ಯಕ್ಷರಾದ ಚಂದ್ರಶೇಖರ.ಕೆ. ಮತ್ತು ವಾಣಿ.ಕೆ.ಎಸ್.ರವರು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಲ.ರಾಮಚಂದ್ರ ಪಳಂಗಾಯ ಎಂ. ಜೆ . ಎಫ್.ರವರು 40,000 ರೂಗಳ ಚೆಕ್ ನ್ನು ಶಾಲೆಗೆ ಹಸ್ತಾಂತರಿಸಿ ಅಧ್ಯಕ್ಷೀಯ ನೆಲೆಯಲ್ಲಿ ಶುಭ ನುಡಿಗಳನ್ನಾಡಿದರು.


ಲಯನೆಸ್ ಶ್ರೀಮತಿ ವಿಮಲ ರಂಗಯ್ಯ ರವರು ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಗೈದರು ಲ. ಚಂದ್ರಶೇಖರ ಪಾನತ್ತಿಲ ಸ್ವಾಗತಿಸಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾದ ಅಜಯ ಕೆ. ಎಂ ರವರು ವಂದಿಸಿದರು.


ಈ ಕಾರ್ಯಕ್ರಮದಲ್ಲಿ ಶಾಲಾ ಶತಮಾನೋತ್ಸವ ಸಮಿತಿಯ ಸದಸ್ಯರು, ಲಯನ್ಸ್ ಕ್ಲಬ್ ಸುಬ್ರಮಣ್ಯ ಸದಸ್ಯರು, ಶಾಲಾ ಎಸ್‌ಡಿಎಂಸಿ ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರ ವೃಂದ ಮತ್ತು ಪುಟಾಣಿ ಮಕ್ಕಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.