ಕೋಡ್ತಿಲು : ಶ್ರೀ ಮಹಾಮ್ಮಾಯಿ ದೇವಿಯ ವಾರ್ಷಿಕ ಮಹಾಪೂಜೆ ಹಾಗೂ ಗುಳಿಗ ದೈವಕ್ಕೆ ತಂಬಿಲ

0

ಐವರ್ನಾಡು ಗ್ರಾಮದ ಕೊಡ್ತಿಲು ನಿಸರ್ಗ ಕಾಲನಿಯಲ್ಲಿ ಶ್ರೀ ಮಹಾಮ್ಮಾಯಿ ದೇವಿಯ ವಾರ್ಷಿಕ ಮಹಾಪೂಜೆ ಹಾಗೂ ಶ್ರೀ ಗುಳಿಗ ದೈವಕ್ಕೆ ತಂಬಿಲ ಸೇವೆ ಫೆ.24 ರಿಂದ ಪ್ರಾರಂಭಗೊಂಡಿದ್ದು ಫೆ.26 ರವರೆಗೆ ನಡೆಯಲಿದೆ.

ಫೆ.17 ರಂದು ಗೊನೆ ಕಡಿಯಲಾಯಿತು. ಫೆ.24 ರಂದು ಸಂಜೆ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಭಂಡಾರ ತೆಗೆಯುವುದು ನಂತರ ಮಾರಿಕಳ ಪ್ರವೇಶ ನಡೆಯಿತು.

ಫೆ.25 ರಂದು ಪ್ರಾತ: ಕಾಲ ಮಾರಿಕಳದಲ್ಲಿ ಬಿಂದು ಆವರಣೆ,ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಅಧ್ಯಕ್ಷ ಕೆ.ರಾಘವ,ಕಾರ್ಯದರ್ಶಿ ರಾಧಾ ಬಿ, ಖಜಾಂಜಿ ಲೋಕೇಶ ಕೆ.ಎಂ, ಗುರಿಕ್ಕಾರರಾದ ಕೆಂಚ ಹಾಗೂ ನಿಸರ್ಗ ಕಾಲನಿಯ ನಿವಾಸಿಗಳು, ಊರ, ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.

ಫೆ.26 ರಂದು ಬೆಳಿಗ್ಗೆ ಗುಳಿಗ ಮಹಾರಾಜ ದೈವಕ್ಕೆ ತಂಬಿಲ ನಡೆಯಲಿದೆ.