ಪಂಜ:ವಿಶ್ವಕರ್ಮ ಸಮಾಜ ಬಾಂಧವರಿಗಾಗಿ ಪ್ರಥಮ ವರ್ಷದ ಕ್ರೀಡೋತ್ಸವ

0

ಸುಳ್ಯ ತಾಲೂಕು ವಿಶ್ವಕರ್ಮ ಸಮಾಜದ ಕಮ್ಮಾರರ ಗುಡಿ ಕೈಗಾರಿಕಾ ಸಂಘ ಇದರ ಆಶ್ರಯದಲ್ಲಿ ವಿಶ್ವಕರ್ಮ ಸಮಾಜ ಬಾಂಧವರಿಗಾಗಿ ಪ್ರಥಮ ವರ್ಷದ “ಕ್ರೀಡೋತ್ಸವ” ಫೆ.25 ರಂದು ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ನಡೆಯಿತು.

ವಿಶ್ವಕರ್ಮ ಕಮ್ಮಾರರ ಗುಡಿ ಕೈಗಾರಿಕಾ ಸಂಘ ಸುಳ್ಯ ತಾಲೂಕಿನ ಅಧ್ಯಕ್ಷ ವಾಸುದೇವ ಆಚಾರ್ಯ ಮರ್ಕಂಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶೇಷಪ್ಪ ಆಚಾರ್ಯ ಶೇಡಿಕಜೆ ಮುಂಡುಗಾರು ಕಾರ್ಯವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.


ಮುಖ್ಯ ಅತಿಥಿಯಾಗಿ ಪಂಜ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಉತ್ಸವ ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ,ವಿಶ್ವಕರ್ಮ ಸಮಾಜದ ಕಮ್ಮಾರರ ಗುಡಿ ಕೈಗಾರಿಕಾ ಸಂಘದ ಜಿಲ್ಲಾಧ್ಯಕ್ಷರಾದ ಸತೀಶ್ ಆಚಾರ್ಯ ಚೊಕ್ಕಾಡಿ ,ಕಾಳಿಕಾಂಬ ವಿನಾಯಕ ದೇವಸ್ಥಾನ ಮಂಗಳೂರು ಇದರ ತಾಲೂಕು ಸಮಿತಿಯ ಪ್ರತಿನಿಧಿ ಜನಾರ್ದನ ಆಚಾರ್ಯ ಕುಂಟಿಕಾನ , ವಿಶ್ವಕರ್ಮ ಕಮ್ಮಾರರ ಗುಡಿ ಕೈಗಾರಿಕಾ ಸಂಘದ ಪುತ್ತೂರು ತಾಲೂಕಿನ ಅಧ್ಯಕ್ಷ ದಾಮೋದರ ಆಚಾರ್ಯ ಸೇಡಿಯಾಪು, ಬೆಳ್ತಂಗಡಿ ತಾಲೂಕಿನ ಅಧ್ಯಕ್ಷ ಆನಂದ ಆಚಾರ್ಯ ಮಾಪಳಾಡಿ, ಬಂಟ್ವಾಳ ತಾಲೂಕಿನ ಅಧ್ಯಕ್ಷ ರವೀಂದ್ರ ಆಚಾರ್ಯ ಕಾವಲ್ ಕಟ್ಟೆ ,ವಾಸ್ತುಶಿಲ್ಪಿ ಪದ್ಮನಾಭ ಆಚಾರ್ಯ ಕಡೆಪಾಲ, ಲಿಗೋಧರ ಆಚಾರ್ಯ ನಾಯರ್ ಕೆರೆ ,ರೋಹಿತ್ ಆಚಾರ್ಯ ಚೀಮುಳ್ಳು ,ಧರ್ಮಪಾಲ ಆಚಾರ್ಯ ಪೆರುವಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಿರಂಜನ ಆಚಾರ್ಯ ಕಡ್ಲಾರ್ ,ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಅಂಕಿತ ಆಚಾರ್ಯ ಕಡ್ಲಾರ್ , ರಾಜ್ಯ ಮಟ್ಟದ ಚಿತ್ರ ಕಲಾ ಸ್ಪರ್ಧೆಯಲ್ಲಿ ಹೆಸರು ಗಳಿಸಿದ ಅನ್ವಿತ ಆಚಾರ್ಯ ಚೀಮುಳ್ಳು ,
ಹಲವಾರು ವರ್ಷಗಳಿಂದ ಕಮ್ಮಾರಿಕೆ ವೃತ್ತಿಯಲ್ಲಿ ಅನುಭವ ಹೊಂದಿರುವ ಹಿರಿಯ ಕಮ್ಮಾರರಾದ ವಿಶ್ವನಾಥ ಆಚಾರ್ಯ ಮರ್ಕಂಜ,ಮೋಹನ ಆಚಾರ್ಯ ನಾಗತೀರ್ಥ, ಜನಾರ್ದನ ಆಚಾರ್ಯ ಕಡ್ಲಾರ್ , ಹಾಗೂ ಕಮ್ಮಾರಿಕೆ ವೃತ್ತಿ ನಡೆಸುತ್ತಿರುವ ಇಬ್ಬರು ಮಹಿಳೆಯರಾದ ಶ್ರೀಮತಿ ಲೀಲಾವತಿ ಆಚಾರ್ಯ ಗುತ್ತಿಗಾರು , ಕುಸುಮಾವತಿ ಆಚಾರ್ಯ ಐವರ್ನಾಡು ರವರನ್ನು ಗೌರವಿಸಲಾಯಿತು.
ಕ್ರೀಡಾ ಕೂಟದಲ್ಲಿ ವಾಲಿಬಾಲ್ ,ಹಗ್ಗಜಗ್ಗಾಟ, ಕ್ರಿಕೆಟ್, ಶಾಲಾ ಮಕ್ಕಳಿಗೆ ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ
ಹೊನ್ನಪ್ಪ ಆಚಾರ್ಯ ದಂಡಕಜೆ ಕಲ್ಲುಗುಂಡಿ ಪ್ರಸ್ತಾವಿಕ ಗೈದರು ಮತ್ತು ಸ್ವಾಗತಿಸಿದರು, ಕುಮಾರಿ ಯಶ್ಮಿತಾ ಚೀಮುಳ್ಳು ಪ್ರಾರ್ಥಿಸಿದರು,
ಕಾರ್ಯಕ್ರಮವನ್ನು ಕಮಲಾಕ್ಷ ಆಚಾರ್ಯ ನಿರೂಪಿಸಿ ವಂದಿಸಿದರು.