ಕಾರಿನಲ್ಲಿದ್ದ ಮಹಿಳೆ ಸೇರಿ ಇತರರಿಗೆ ಗಾಯ: ರಾಜಿಯಲ್ಲಿ ಇತ್ಯರ್ಥ









ಕಾಸರಗೋಡಿನಿಂದ ಮಡಿಕೇರಿಗೆ ಹೋಗುತ್ತಿದ್ದ ಇನೋವಾ ಕಾರನ್ನು ಅರಂತೋಡು ಬಳಿ ಜೀಪಿನಲ್ಲಿ ಬಂದ ಕೆಲ ಯುವಕರು ಅಡ್ಡಗಟ್ಟಿ ಕಾರಿನಲ್ಲಿದ್ದವರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ನಿನ್ನೆ ಅರಂತೋಡು ಕೆಳಗಿನ ಪೇಟೆ ಬಳಿ ಈ ಘಟನೆ ನಡೆದಿದ್ದು ಕಾರಿನ ಹಿಂದಿನಿಂದ ಬರುತ್ತಿದ್ದ ಜೀಪು ಏಕಾಏಕಿ ಕಾರಿನ ಮುಂಭಾಗಕ್ಕೆ ಬಂದು ಅಡ್ಡಗಟ್ಟಿ ಕಾರನ್ನು ನಿಲ್ಲಿಸಿ ಕಾರಿನಲ್ಲಿದ್ದವರನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಘಟನೆಯಿಂದ ಕಾರಿನಲ್ಲಿದ್ದ ಮಹಿಳೆ ಸೇರಿ ಇನ್ನಿತರರಿಗೆ ಗಾಯಗಳಾಗಿ ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಪ್ರಕರಣ ಸುಳ್ಯ ಠಾಣಾ ಮೆಟ್ಟಿಲೇರಿದ್ದು ಇತ್ತಂಡದವರನ್ನು ಠಾಣೆಗೆ ಕರೆಸಿದ ಪೊಲೀಸರು ಘಟನೆಯ ಮಾಹಿತಿಯನ್ನು ಪಡೆದುಕೊಂಡು ಬಳಿಕ ಪರಸ್ಪರ ಮಾತುಕತೆಯ ಮೂಲಕ ರಾಜಿಯಲ್ಲಿ ಇತ್ಯರ್ಥಪಡಿಸಿಕ್ಕೊಂಡು ತೆರಳಿದ್ದಾರೆ ಎಂದು ತಿಳಿದು ಬಂದಿದೆ.









