ಜೇಸಿಐ ಬೆಳ್ಳಾರೆ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮ

0

ಜೇಸಿಐ ಬೆಳ್ಳಾರೆ ಇದರ ವತಿಯಿಂದ ಬೆಳ್ಳಾರೆ ಆರೋಗ್ಯ ಕೇಂದ್ರದಲ್ಲಿ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮ ಫೆ.26 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಬೆಳ್ಳಾರೆ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಬೇಬಿ ಸಿ ಸಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಳಾರೆ ಜೇಸಿಐ ಘಟಕದ ಅಧ್ಯಕ್ಷ ಜಗದೀಶ್ ರೈ ಪೆರುವಾಜೆ ವಹಿಸಿದರು. ಅತಿಥಿಗಳಾಗಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಮಿತಾ ರೈ ಮತ್ತು ಬೆಳ್ಳಾರೆ ಆರೋಗ್ಯ ಕೇಂದ್ರದ ವೈದ್ಯರಾದ ಪಹಾಜ್ ಅಹಮದ್ ಉಪಸ್ಥಿತರಿದ್ದರು. ಜೇಸಿ ವಾಣಿಯನ್ನು ಯಾಹ್ಯ ಬೆಳ್ಳಾರೆ ಉದ್ಘೋಷಿಸಿದರು. ಬೆಳ್ಳಾರೆ ಜೇಸಿ ಘಟಕದ ಪೂರ್ವಾಧ್ಯಕ್ಷರಾದ ಪ್ರಸಾದ್ ಸೇವಿತ ವಂದಿಸಿದರು . ಜೇಸಿ ಪೂರ್ವಾಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.