ಪೈಂಬೆಚ್ಚಾಲು : ಡಾ.ಮಹಮ್ಮದ್ ಕುಂಞಿ ಡಿ.ಎಮ್. ದರ್ಖಾಸ್ತು ನಿಧನ

0

ಸುಳ್ಯ ಪೈಂಬಚಾಲ್ ದರ್ಖಾಸ್ತು ನಿವಾಸಿ ದಿ. ಮೈದು ಕುಂಞಿ ಹಾಗೂ ದಿವಂಗತ ಆಯಿಷಾ ದಂಪತಿಯ ಪುತ್ರ ಡಾ. ಮಹಮ್ಮದ್ ಡಿ.ಎಮ್ ಇವರು ಅಲ್ಪ ಕಾಲದ ಅಸೌಖ್ಯದಿಂದ ಮಾರ್ಚ್ 8 ರಂದು ಮಧ್ಯಾಹ್ನದ ವೇಳೆ ನಿಧನರಾದರು.

ಪೈಂಬಚ್ಚಾಲಿನ ಪ್ರಥಮ ವೈಧ್ಯ ಎಂದು ಪ್ರಸಿದ್ದರಾಗಿದ್ದ ಇವರು ಕಾಸರಗೋಡಿನಲ್ಲಿ ದಂತ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಕೊಡುಗೈದಾನಿಯೂ ಆಗಿದ್ದರು.

ಮೃತರು ಸಹೋದರರಾದ ಮೂಸಾ, ಅಬ್ದುಲ್ ರಹಮಾನ್, ಸಹೋದರಿಯರಾದ ಸಾರಾ,ಫಾತಿಮಾ ಹಾಗೂ ಪತ್ನಿ ಮಕ್ಕಳು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.