ಅಜ್ಜಾವರ ದೇವರ ಕಳಿಯ ಆಶ್ರಮದಲ್ಲಿ ಆಸೆಯೇ ನಾಶಕ್ಕೆ ಮೂಲ ಕೃತಿ ಬಿಡುಗಡೆ

0

ಶಿವ ಪೂಜೆ ಭಜನಾ ಸತ್ಸಂಗ ಕಾರ್ಯಕ್ರಮ

ಜನರ ಸೇವೆಯ ಮೂಲಕ ದೇವರನ್ನು ಕಾಣಬೇಕು.ಆಸೆಯೇ ನಮ್ಮ ವಿನಾಶಕ್ಕೆ ಕಾರಣ . ಇದನ್ನು ಕ್ರತಿಯ ಮೂಲಕ ಸ್ವಾಮೀಜಿ ಯೋಗೇಶ್ವರಾನಂದ ಸ್ವಾಮೀಜಿಯವರು ಹೊರ ತಂದಿದ್ದಾರೆ .ಇದು ಸ್ಬಾಮೀಜಿಯವರ ಉತ್ತಮಯಾಗಿದ್ದು ಎಲ್ಲರೂ ಕೊಂಡು ಓದಿ ಎಂದು ಸುಳ್ಯ ಗಾರ್ಡನ್ ಆಸ್ಪತ್ರೆಯ ವೈದಾಧಿಕಾರಿ ಡಾ.ಸಾಯಿಗೀತಾ ಹೇಳಿದರು.


ಚೈತನ್ಯ ಸೇವಾ ಟ್ರಸ್ಟ್( ರಿ ) ಅಜ್ಜಾವರ ದೇವರ ಕಳಿಯ ಇಲ್ಲಿಯ ಸ್ವಾಮೀಜಿಯರ 201 ನೇ ಕ್ರತಿ ಆಸೆಯೇ ನಾಶಕ್ಕೆ ಮೂಲ ಕ್ರತಿಯನ್ನು ಆಶ್ರಮದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ವಾಮೀಜಿಯವರು, “ಸಮಾಜದಲ್ಲಿ ಯಾರೂ ಮೇಲು ಕೀಳಲ್ಲ, ಎಲ್ಲರೂ ಸಮಾನರು . ಸಮಾಜ ನಾವು ಸಹಾಯ ಮಾಡಿದ್ದಾಗ ನಮಗೆ ಸಮಾಜದ ಸಹಾಯ ದೊರೆಯುತ್ತದೆ ಎಂದು ಹೇಳಿ ಶಿವರಾತ್ರಿಯ ಶಭಾಶಯ ಕೋರಿದರು.


ಅಡೂರು ಮಹಾಲಿಂಗೇಶ್ಬರ ಭಜನಾ ಸಂಘದ ಅಧ್ಯಕ್ಷ ವೇಣುಗೋಪಾಲ, ಸುಳ್ಯ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಶಂಕರ ಪೆರಾಜೆ ಮುಖ್ಯ ಅತಿಥಿಗಳಾಗಿದ್ದರು.
ಚರನ್ ಮುಡೂರು ಸ್ವಾಗತಿಸಿದರು.ಚೈತನ್ಯ ಸೇವಾ ಆಶ್ರಮದ ಟ್ರಸ್ಟಿ ಪ್ರಣವಿ ವಂದಿಸಿದರು.ಮಿಥುನ್ ಕಾರ್ಯಕ್ರಮ ನಿರೂಪಿಸಿದರು.ಚರಣ್ಯ ಪ್ರಾರ್ಥಿಸಿದರು.ಬೆಳಿಗ್ಗೆ ಶಿವ ಪೂಜೆ ಭಜನಾ ಅಡೂರು ಮಹಾಲಿಂಗೇಶ್ವರ ಭಜನಾ ಸಂಘ ಸ್ಥಳೀಯರಿಂದ ಭಜನಾ ಸೇವೆ ನಡೆಯಿತು.