ಪೈಲಾರಿನಲ್ಲಿ ಮಹಿಳಾ ದಿನಾಚರಣೆ

0

ಶೌರ್ಯ ಯವತಿ ಮಂಡಲ (ರಿ.)ಪೈಲಾರು
ಇದರ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಪೈಲಾರಿನ ಮಿತ್ರವೃಂದ ಕಚೇರಿಯಲ್ಲಿ ನೆರವೇರಿಸಲಾಯಿತು.

ಯುವತಿ ಮಂಡಲದ ಅಧ್ಯಕ್ಷರಾದ ಶ್ರೀಮತಿ ರಾಜೀವಿ ಗೋಳ್ಯಾಡಿ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಗುತ್ತಿಗಾರು ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕಿ ಶ್ರೀಮತಿ ಪೂರ್ಣಿಮಾ , ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀಮತಿ ಪ್ರೇಮ ಗೋಳ್ಯಾಡಿ, ಹಾಗೂ ನಾಟಿ ವೈದ್ಯೆ ಶೀಮತಿ ಚನಿಯಾರು ಕುಕ್ಕುಜಡ್ಕ ಉಪಸ್ಥಿತರಿದ್ದರು..

ಕು. ಅನುಷಾ ದಾತಡ್ಕ ಪ್ರಾರ್ಥನೆಗೈದರು, ಲಲಿತಾ ಲಕ್ಷ್ಮಿ ಊರುಸಾಗು ಸ್ವಾಗತಿಸಿದರು,
ಅತಿಥಿಗಳಾದ ಶೀಮತಿ ಪ್ರೇಮ ಗೋಳ್ಯಾಡಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಾಟಿ ವೈದ್ಯೆ ಶ್ರೀಮತಿ ಚನಿಯಾರು ಕುಕ್ಕುಜಡ್ಕ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ವಿವಿಧ ಮನೋರಂಜನಾ ಆಟೋಟ ಸ್ಪರ್ಧೆಯನ್ನು ನಡೆಸಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು.

ಶ್ರೀಮತಿ ಕಮಲಾಕ್ಷಿ ಗುಡ್ಡೆಮನೆ ಕಾರ್ಯಕ್ರಮ ನಿರೂಪಿಸಿ ದೀಪಿಕಾ ದೊಡ್ಡಡ್ಕ ಧನ್ಯವಾದಗೈದರು.