ಗಾಂಧಿನಗರ : ಆರಿ ಬ್ಲೌಸ್ ಎಂಬ್ರೋಯಿಡರಿ ತರಗತಿಗೆ ದಾಖಲಾತಿ ಆರಂಭ

0

ಶಾಲಾ ವಿದ್ಯಾರ್ಥಿಗಳಿಗೆ ಸ್ಪೆಷಲ್ ಡಿಸ್ಕೌಂಟ್

ಸುಳ್ಯದ ಗಾಂಧಿನಗರದ ಮೋರ್ ಸೂಪರ್ ಮಾರ್ಕೆಟ್ ಮುಂಭಾಗವಿರುವ ಶಶಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ ಆರಿ ಬ್ಲೌಸ್ ಎಂಬ್ರೋಯಿಡರಿ ಇಲ್ಲಿ 2024-25ನೇ ಸಾಲಿನ ದಾಖಲಾತಿ ಪ್ರಾರಂಭಗೊಂಡಿದೆ.

ಇಲ್ಲಿ ಆರಿ ಬ್ಲೌಸ್ ಎಂಬ್ರೋಯಿಡರಿ ವರ್ಕ್ಸ್ ತರಬೇತಿ ನೀಡಲಾಗುವುದು, ಬೇಸಿಕ್‌ನಿಂದ ಬ್ಲೌಸ್ ರೆಡಿಯಾಗುವರೆಗೂ ಕಲಿಸಿಕೊಡಲಾಗುವುದು. ಕಲಿಯುವ ಸಾಮಾಗ್ರಿಗಳನ್ನು ವಿತರಿಸಲಾಗುವುದು,
ಕೆಲಸಕ್ಕೆ ಹೋಗುವವರಿಗೆ ವಾರದ ಒಂದು ದಿನ ಅಥವಾ ಭಾನುವಾರ ತರಬೇತಿ ನೀಡಲಾಗುವುದು, ವಾರದ 7ದಿನವೂ ತರಬೇತಿ ನೀಡಲಾಗುವುದು.
ಸಮಯ 9.30 ರಿಂದ 5 ಗಂಟೆ ಆಗಿರುತ್ತದೆ.

ಇದರೊಂದಿಗೆ ಎಲ್ಲಾ ತರಹದ ಎಂಬ್ರೋಯಡರಿ ವರ್ಕ್ಸ್ ರಿಯಾಯಿತಿ ದರದಲ್ಲಿ ಮಾಡಿಕೊಡಲಾಗುವುದು. ಎಂಬ್ರೋಯಿಡರಿ ಬೇಕಾದ ಎಲ್ಲಾ ಕಚ್ಚಾ ವಸ್ತುಗಳು ದೊರೆಯುತ್ತದೆ. ಹಾಗೂ ಬೇಸಿಗೆ ರಜಾ ದಿನಗಳಲ್ಲಿ ಆರಿ ಎಂಬ್ರೋಯಿಡರಿ ಕಲಿಯಲು ಆಸಕ್ತಿ ಇರುವ ಶಾಲಾ ವಿದ್ಯಾರ್ಥಿಗ ಳಿಗೆ ಶುಲ್ಕದ ಮೇಲೆ ಸ್ಪೆಷಲ್ ಡಿಸ್ಕೌಂಟ್ ಇರುತ್ತದೆ ಎಂದು ಸಂಸ್ಥೆಯ ಮಾಲಕಿ ದೇವಿಶ್ರೀ ಕಿರಣ್ ತಿಳಿಸಿದ್ದಾರೆ.

ಆರಿ ಬ್ಲೌಸ್ ಎಂಬ್ರೋಯಿಡರಿ ಬಗ್ಗೆ : ಸೀರೆ ನಮ್ಮ ಸಾಂಪ್ರದಾಯಿಕ ಉಡುಗೆಯಾದರೂ ಎವರ್ ಗ್ರೀನ್ ಟ್ರೆಂಡಿ ಅಂಡ್ ಫ್ಯಾಷನಬಲ್ ಡ್ರೆಸ್ ಅಂದರೆ ಅದು ಸೀರೆ ಮಾತ್ರ. ಹಾಗಾಗಿ ಇದಕ್ಕೆ ನಾವು ಸಾವಿರಾರು ಬೆಲೆ ಕೊಟ್ಟು ಬ್ಲೌಸ್ ಸ್ಟಿಚ್, ಎಂಬ್ರೋಯಿಡರಿ ಮಾಡಿಸುತ್ತೇವೆ. ಇದನ್ನು ನೀವೇ ಕಲಿತು ಮನೆಯಲ್ಲೇ ಕುಳಿತು ಹಣ ಗಳಿಸಬಹುದು. ಅಥವಾ ಹವ್ಯಾಸವಾಗಿಯೂ ಮಾಡಬಹುದು.
ಈಗ ಬ್ಲೌಸ್ ಎಂಬ್ರೋಯಿಡರಿ ಡಿಸೈನ್ ಮಾಡಲು ಮೆಷಿನ್ ಬಂದಿದೆ ಆದರೆ ಆರಿ ವರ್ಕ್ಸ್ ಅನ್ನುವುದು ಕೈನಲ್ಲಿಯೇ ಮಾಡುವಂತಹದು, ಮೆಶಿನ್‌ನಲ್ಲಿ ಸ್ಟೋನ್ ಡಿಸೈನ್ ಮಾಡಲು ಸಾಧ್ಯವಿಲ್ಲ, ಆರಿ ತರಗತಿಯಲ್ಲಿ ಇದು ಸಾಧ್ಯವಾಗುವುದು.
ಜೊತೆಗೆ ಎಂಬ್ರಾಯ್ಡರಿ ಬೇಸಿಕ್ ನಿಂದ ಕಲಿಯಬಹುದು.

ಈ ಕ್ಷೇತ್ರದಲ್ಲಿ ಫ್ಯಾಶನ್ ಬದಲಾಗಬಹುದು, ಆದರೆ ಬ್ಯುಸಿನೆಸ್ ಕಡಿಮೆಯಾಗಲು ಸಾಧ್ಯವಿಲ್ಲ. ಏನಿಲ್ಲವೆಂದರು ದಿನನಿತ್ಯದ ಕೆಲಸ ಮುಗಿಸಿ
ಮನೆಯಲ್ಲಿ ಕುಳಿತು 400ರಿಂದ 600 ದುಡಿಯಬಹುದು ಎನ್ನುತ್ತಾರೆ ಇಲ್ಲಿ ಕಲಿತು, ಹಣ ಸಂಪಾದಿಸುತ್ತಿರುವ ಮಹಿಳೆಯರು. ಹೆಚ್ಚಿನ ಮಾಹಿತಿಗಾಗಿ:
8296310448 ಸಂಪರ್ಕಿಸಬಹುದು.