ಪೆರಾಜೆ: ಗ್ರಾ.ಪಂ. ಅನುಮತಿ ಇಲ್ಲದೇ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಕೆ ಹಿನ್ನೆಲೆ

0

ಪೊಲೀಸರ ಉಪಸ್ಥಿತಿಯಲ್ಲಿ ಗ್ರಾ.ಪಂ.ನಿಂದ ಬ್ಯಾನರ್ ತೆರವು

ಪೆರಾಜೆಯಿಂದ ಆಲೆಟ್ಟಿ – ದೊಡ್ಡಡ್ಕ – ಕಾಪುಮಲೆ – ಕುಂದಲ್ಪಾಡಿ – ಕುಂಬಳಚೇರಿ ವಿ.ಎಸ್.ಎಸ್.ಎನ್. ರಸ್ತೆ ಕಾಮಗಾರಿಗೆ ಒತ್ತಾಯಿಸಿ, ಪೆರಾಜೆಯಲ್ಲಿ ಅಳವಡಿಸಲಾಗಿದ್ದ, ಲೋಕಸಭಾ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸುವ ಸಂದರ್ಭದಲ್ಲಿ ಗ್ರಾ.ಪಂ. ಅನುಮತಿ ಪಡೆದಿಲ್ಲ ಎಂದು ಪೊಲೀಸರ ಉಪಸ್ಥಿತಿಯಲ್ಲಿ ಗ್ರಾ.ಪಂ. ವತಿಯಿಂದ ಬ್ಯಾನರ್ ತೆರವುಗೊಳಿಸಿದ ಘಟನೆ ಮಾ‌.12ರಂದು ವರದಿಯಾಗಿದೆ.

ಪೆರಾಜೆ – ಆಲೆಟ್ಟಿ – ದೊಡ್ಡಡ್ಕ – ಕಾಪುಮಲೆ – ಕುಂದಲ್ಪಾಡಿ – ಕುಂಬಳಚೇರಿ – ವಿ.ಎಸ್.ಎಸ್.ಎನ್. ಸುಮಾರು 12 ಕಿ.ಮೀ. ರಸ್ತೆ ಕಾಮಗಾರಿಯನ್ನು ನಡೆಸದೇ, ಅಲ್ಲಿಗೆ ಇರಿಸಿದ್ದ ಅನುದಾನದಲ್ಲಿ ಗ್ರಾಮದ ಬೇರೆ ಕಡೆ ಕಾಮಗಾರಿ ನಡೆಸಲಾಗುತ್ತಿದ್ದು, ಅನುದಾನ ಬಿಡುಗಡೆಯಾದ ಸ್ಥಳದಲ್ಲೇ ಕಾಮಗಾರಿ ನಡೆಸುವಂತೆ ಒತ್ತಾಯಿಸಿ, ಸ್ಥಳೀಯರಾದ ದೀನರಾಜ್ ಪೆರಾಜೆ ಅವರ ಖಾಸಗಿ ಜಾಗದಲ್ಲಿ ಮತದಾನ ಬಹಿಷ್ಕಾರದ ಬ್ಯಾನರನ್ನು ಅಳವಡಿಕೆ ಮಾಡಲಾಗಿತ್ತು.
ಇದೀಗ ಖಾಸಗಿ ಜಾಗವಾಗಿದ್ದರೂ, ಬ್ಯಾನರ್ ಅಳವಡಿಕೆ ಮಾಡಲು ಸ್ಥಳೀಯ ಗ್ರಾ.ಪಂ. ಅನುಮತಿ ಪತ್ರ ಪಡೆದುಕೊಳ್ಳದೇ, ಇರುವುದರಿಂದ ಪೊಲೀಸರ ಉಪಸ್ಥಿತಿಯಲ್ಲಿ ಬ್ಯಾನರ್ ತೆರವುಗೊಳಿಸಿರುವುದಾಗಿ ತಿಳಿದುಬಂದಿದೆ.