ನಿವೃತ್ತ ಎಎಸ್ಐ ಬೊಮ್ಮೆಟ್ಟಿ ಪುರುಷೋತ್ತಮ ಗೌಡ ನಿಧನ

0

ಸುಳ್ಯ ಜಟ್ಟಿಪಳ್ಳ ಕನಿಕರಪಳ್ಳದ ಬೊಮ್ಮೆಟ್ಟಿ ಪುರುಷೋತ್ತಮ ಗೌಡ ಅಲ್ಪಕಾಲದ ಅಸೌಖ್ಯದಿಂದ ಮಾ.25 ರಂದು ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.

ಸಂಪಾಜೆಯವರಾದ ಇವರು ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಎಎಸ್‌ಐ ಆಗಿ ನಿವೃತ್ತರಾದರು. ಪತ್ನಿ ಶ್ರೀಮತಿ ಸುಶೀಲಾ , ಮಕ್ಕಳಾದ ಪೃಥ್ವಿ, ಪೂಜಾಶ್ರೀ, ಪೂರ್ಣಚಂದ್ರ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.