ಅರಂಬೂರು: ರೋಟರಿ ಕ್ಲಬ್ ವತಿಯಿಂದ ಉಚಿತ ಮಧುಮೇಹ ಮತ್ತು ರಕ್ತ ದೊತ್ತಡ ತಪಾಸಣಾ ಶಿಬಿರ

0

ಸುಳ್ಯ ರೋಟರಿ ಕ್ಲಬ್ ಹಾಗೂ ರೋಟರಿ ಗ್ರಾಮೀಣ ದಳ ಅರಂಬೂರು, ಎಸ್.ಬಿ.ಮೆಡಿಕಲ್ ಲ್ಯಾಬೋರೇಟರಿ ಇದರ ಸಹಯೋಗದಲ್ಲಿ ಪ್ರಣವಂ ನಿಲಯಂ ಶ್ರೀ ಕೃಷ್ಣ ನಗರ ಅರಂಬೂರಿನಲ್ಲಿ ಉಚಿತ ಮಧುಮೇಹ ಮತ್ತು ರಕ್ತ ದೊತ್ತಡ ತಪಾಸಣಾ ಶಿಬಿರವು ಮಾ.24 ರಂದು ನಡೆಯಿತು.

ರೋಟರಿ ಕ್ಲಬ್ ಅಧ್ಯಕ್ಷ ರೊ. ಆನಂದ ಖಂಡಿಗ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಉದ್ಯಮಿ ಕೃಷ್ಣ ಕಾಮತ್ ಅರಂಬೂರು ರವರು ಶಿಬಿರವನ್ನು ಉದ್ಘಾಟಿಸಿದರು. ಆಲೆಟ್ಟಿ ಪಂಚಾಯತ್ ಸದಸ್ಯೆ ಅನಿತಾ ಅರಂಬೂರು, ಕ್ಲಬ್ ಚಯರ್ ಮೆನ್ ಭಾಸ್ಕರ ನಾಯರ್ ಅರಂಬೂರು, ರೋಟರಿ ಗ್ರಾಮೀಣ ದಳದ ಅಧ್ಯಕ್ಷೆ ಶ್ರೀಮತಿ ಪ್ರೇಮಲತಾ, ಡಾ.ಸುಬಿನ್ ಕೃಷ್ಣ ಉಪಸ್ಥಿತರಿದ್ದರು.

ಶಿಬಿರದ ಸದುಪಯೋಗವನ್ನು ನೂರಾರು ಮಂದಿ ಸ್ಥಳೀಯರು ಪಡೆದುಕೊಂಡರು. ರೋಟರಿ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು, ಗ್ರಾಮೀಣ ದಳದ ಸದಸ್ಯರು ಸಹಕರಿಸಿದರು.