ಸುಳ್ಯ ಶ್ರೀ ರಾಮ ಮಂದಿರದ ಬ್ರಹ್ಮಕಲಶೋತ್ಸವ ಫೆ.25 ರಿಂದ 28 ರ ತನಕ ಅತ್ಯಂತ ವಿಜೃಂಭಣೆಯಿಂದ ಜರುಗಿದ್ದು ಇದರ ಲೆಕ್ಕ ಪತ್ರ ಮಂಡನೆ ಮತ್ತು ಸಹಕರಿಸಿದ ಸಮಿತಿಯ ಸಂಚಾಲಕರಿಗೆ ಹಾಗೂ ಸದಸ್ಯರಿಗೆ ಅಭಿನಂದನೆ ಸಲ್ಲಿಸುವ ಸಮಾರಂಭವು ಮಾ.24 ರಂದು ಮಂದಿರದಲ್ಲಿ ನಡೆಯಿತು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೃಷ್ಣ ಕಾಮತ್ ರವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಕೆ.ಉಪೇಂದ್ರ ಪ್ರಭು ರವರು ಬ್ರಹ್ಮಕಲಶೋತ್ಸವದ ಯಶಸ್ವಿಯಾಗಿ ಪೂರೈಸಲು ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಸಮಿತಿಯ ಕೋಶಾಧಿಕಾರಿ ಡಾ.ಲೀಲಾಧರ್ ಡಿ.ವಿ ಹಾಗೂ ಆರ್ಥಿಕ ಸಮಿತಿ ಸಂಚಾಲಕ ಅಶೋಕ ಪ್ರಭು ರವರು ಬ್ರಹ್ಮಕಲಶೋತ್ಸವದ ಸಂಪೂರ್ಣ ಅಯ- ವ್ಯಯದ ಕುರಿತು ಸವಿವವರವನ್ನು ಮಂಡಿಸಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ ರವರುಬ್ರಹ್ಮಕಲಶೋತ್ಸವದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಸಮಿತಿಯ ಸಂಚಾಲಕರಿಗೆ ಮತ್ತು ಸದಸ್ಯರಿಗೆ ಅಭಿನಂದನೆಯನ್ನು ಸಲ್ಲಿಸಿದರು. ವೇದಿಕೆಯಲ್ಲಿ ಸಮಿತಿ ಗೌರವ ಸಲಹೆಗಾರ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ಧರ್ಮದರ್ಶಿ ಮಂಡಳಿಯ ಕಾರ್ಯದರ್ಶಿ ಎನ್.ಶ್ರೀನಿವಾಸ ರವರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಸಮಿತಿ ಸಂಚಾಲಕ ಬೂಡು ರಾಧಾಕೃಷ್ಣ ರೈ, ಮಹಿಳಾ ಸಮಿತಿ ಸಂಚಾಲಕಿ ಶಶಿಕಲಾ ನೀರಬಿದಿರೆ, ಪ್ರಭಾಕರ ನಾಯರ್, ಸಂದೇಶ್ ಕುರುಂಜಿ, ರಾಜು ಪಂಡಿತ್,ಸುನಿಲ್ ಕುಮಾರ್ ಕೇರ್ಪಳ, ವಿನಯ ಕುಮಾರ್ ಕಂದಡ್ಕ ರವರು ಉತ್ಸವದ ಕುರಿತು ಅಭಿಪ್ರಾಯ ಹಂಚಿಕೊಂಡರು.
ಗಾಯಕ ಗಣೇಶ್ ಬಿ.ಎಸ್ ಪ್ರಾರ್ಥಿಸಿದರು. ಧರ್ಮದರ್ಶಿ ಮಂಡಳಿಯ ಸದಸ್ಯ ಗೋಪಾಲ ಎಸ್.ನಡುಬೈಲು ಸ್ವಾಗತಿಸಿದರು. ಭಾಸ್ಕರ ನಾಯರ್ ಅರಂಬೂರು ವಂದಿಸಿದರು. ಕಾರ್ಯದರ್ಶಿ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಧರ್ಮದರ್ಶಿ ಮಂಡಳಿಯ ಸದಸ್ಯರು, ಮಂದಿರದ ಅರ್ಚಕರು ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು, ಉಪ ಸಮಿತಿ ಸಂಚಾಲಕರು ಮತ್ತು ಸದಸ್ಯರು ಭಾಗವಹಿಸಿದರು. ಆಗಮಿಸಿದ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.