ಅರಂಬೂರು ಬದರ್ ಜುಮಾ ಮಸೀದಿಯಲ್ಲಿ ಇಫ್ತಾರ್ ಸಂಗಮ

0

ಅರಂಬೂರು ಬದರ್ ಜುಮಾ ಮಸೀದಿಯಲ್ಲಿ ರಂಜಾನ್ ತಿಂಗಳ ಅಂಗವಾಗಿ ಇಫ್ತಾರ್ ಸಂಗಮ ನಡೆಯಿತು. ಸ್ಥಳೀಯ ನೂರಾರು ಮಂದಿ ಉಪವಾಸ ವೃತದಾರಿಗಳು ಸಂಗಮದಲ್ಲಿ ಭಾಗವಹಿಸಿದ್ದರು.

ಸ್ಥಳೀಯ ಮಸೀದಿ ಖತೀಬರಾದ ಮುಹಿನುದ್ದೀನ್ ಫೈಝಿ ದುವಾ ನೆರವೇರಿಸಿದರು. ಸ್ಥಳೀಯ ಮಸೀದಿ ಆಡಳಿತ ಕಮಿಟಿಯ ಅಧ್ಯಕ್ಷ ಎಸ್ ಭಾಷಾ ಸಾಹೇಬ್, ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ಮಾಜಿ ಸದಸ್ಯ ಎಸ್ ಸಂಶುದ್ದೀನ್ ಅರಂಬೂರು, ಗಾಂಧಿನಗರ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಮುಸ್ತಫಾ ಜನತಾ, ಮುಖಂಡರುಗಳಾದ ಕೆ ಬಿ ಇಬ್ರಾಹಿಂ, ಸ್ಥಳೀಯ ಮಸೀದಿ ಕಮಿಟಿ ಕಾರ್ಯದರ್ಶಿ ಕಲಂದರ್ ಶಾಪಿ, ಸಮಿತಿಯ ಪದಾಧಿಕಾರಿಗಳು, ನೂರಾರು ಮಂದಿ ಮುಸಲ್ಮಾನ ಬಾಂಧವರು ಉಪಸ್ಥಿತರಿದ್ದರು.