ಗಾಂಧಿನಗರ ಜುಮಾ ಮಸ್ಜಿದ್ ನಲ್ಲಿ ಮುಅದ್ದಿನ್ ಆಗಿ ಸೇವೆ ಸಲ್ಲಿಸಿದ್ದ ಶಿಹಾಬ್ ಬದ್ರಿ ಉಸ್ತಾದ್ ನಿಧನ

0

ಸುಳ್ಯ ಗಾಂಧಿನಗರ ಕೇಂದ್ರ ಜುಮಾ ಮಸ್ಜಿದ್ ಮುಅದ್ದಿನ್ ಆಗಿ ಸೇವೆ ಸಲ್ಲಿಸಿದ್ದ ಶಿಹಾಬ್ ಬದ್ರಿ ಉಸ್ತಾದ್ ಬದಿಯಡ್ಕ ರವರು ಅಲ್ಪ ಕಾಲದ ಅಸೌಖ್ಯದಿಂದ ಮಾ. 30 ರಂದು ರಾತ್ರಿ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅಲ್ಪಕಾಲದ ಅನಾರೋಗ್ಯ ಕಾರಣದಿಂದ ಚಿಕಿತ್ಸೆ ಪಡೆಯುತ್ತಿದ್ದು ಇದೀಗ ಚಿಕಿತ್ಸೆ ಫಲಕಾರಿಯಾಗದೆ ಉಸ್ತಾದರು ಮೃತಪಟ್ಟಿದ್ದಾರೆ.

ಗಾಂಧಿನಗರ ಮಸೀದಿಯಲ್ಲಿ ಸುಮಾರು ಮೂರು ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಇವರು ಸುಮಧುರ ಕಂಠದಿಂದ ಆಝಾನ್ ಕರೆಯುವುದರಲ್ಲಿ ಖ್ಯಾತಿ ಪಡೆದಿದ್ದರು.