ಡಾ.ಕುರುಂಜಿ ಚಿದಾನಂದರ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.

0

ಸುಳ್ಯದ ಕೆ.ವಿ.ಜಿ. ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಕೆ.ವಿ.ಚಿದಾನಂದ ಅವರ ಮನೆಗೆ ಮಾ.30 ರಂದು ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರ ಆಶೀರ್ವಾದವನ್ನು ಪಡೆದರು. ಡಾ.ಚಿದಾನಂದರು ಪದ್ಮರಾಜರನ್ನು ಶಾಲು ಹೊದಿಸಿ ಗೌರವಿಸಿದರು.

ಮನೆಯವರಾದ ಶ್ರೀಮತಿ ಶೋಭಾ ಚಿದಾನಂದ್, ಅವರ ಸೊಸೆ ಡಾ.ಪಾರ್ವತಿ ಅಕ್ಷಯ್, ಡಾ.ಡಿ.ವಿ.ಲೀಲಾಧರ್ ರವರಲ್ಲದೆ, ಡಿಸಿಸಿ ಅಧ್ಯಕ್ಷ ಎಂ.ಎಲ್.ಸಿ. ಕೆ.ಹರೀಶ್ ಕುಮಾರ್, ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಮಾಜಿ ಸಚಿವ ಬಿ.ರಮಾನಾಥ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಸುಳ್ಯ ಕ್ಷೇತ್ರದ ಪ್ರಚಾರ ಸಮಿತಿ ಉಸ್ತುವಾರಿ ಎನ್.ಜಯಪ್ರಕಾಶ್ ರೈ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಜಿ.ಕೃಷ್ಣಪ್ಪ, ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿಸೋಜಾ, ಪ್ರಮುಖರಾದ ರಾಧಾಕೃಷ್ಣ ಬೊಳ್ಳೂರು, ಕಿರಣ್ ಬುಡ್ಲೆಗುತ್ತು, ವಿಜಯ ಕುಮಾರ್ ಸೊರಕೆ, ಡಾ. ಎನ್.ಎ. ಜ್ಞಾನೇಶ್, ಮಹಮ್ಮದ್ ಕುಂಞಿ ಗೂನಡ್ಕ, ಕೆ.ಎಂ.ಮುಸ್ತಫ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಪಿ.ಎ.ಮಹಮ್ಮದ್, ರಾಜು ಪಂಡಿತ್, ರಂಜಿತ್ ರೈ ಮೇನಾಲ, ಇಸ್ಮಾಯಿಲ್ ಪಡ್ಪಿನಂಗಡಿ, ಎಸ್.ಸಂಶುದ್ದೀನ್, ಮಹಮ್ಮದ್ ಫವಾಝ್, ಕೇಶವ ಮೊರಂಗಲ್ಲು, ಅಶೋಕ್ ಚೂಂತಾರು,ಶ್ರೀಮತಿ ಲೀಲಾ ಮನಮೋಹನ್, ಶ್ರೀಮತಿ ಪ್ರವೀಣಾ ಮರುವಂಜ, ಡೇವಿಡ್ ಧೀರ ಕ್ರಾಸ್ತಾ, ಮಹೇಶ್ ಬೆಳ್ಳಾರ್ಕರ್ ಮತ್ತಿತರರು ಉಪಸ್ಥಿತರಿದ್ದರು.