ಬೆಳ್ಳಾರೆ ಕೆ.ಪಿ.ಎಸ್.ನ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾವತಿಯವರು ರಾಷ್ಟ್ರಮಟ್ಟದ ಅಥ್ಲೆಟಿಕ್ ಪಂದ್ಯಾಟಕ್ಕೆ ಕ್ರೀಡಾಧಿಕಾರಿಯಾಗಿ ನೇಮಕ

0

67 ನೇ ರಾಷ್ಟ್ರಮಟ್ಟದ 17 ರ ವಯೋಮಾನದ ಬಾಲಕ ಬಾಲಕಿಯ ಅಥ್ಲೆಟಿಕ್ ಪಂದ್ಯಾವಳಿಯು ಬಿಹಾರದ ಪಾಟ್ನಾದಲ್ಲಿ ಎ.6ರಿಂದ 9ರವರೆಗೆ ನಡೆಯಲಿದೆ.
ಪಂದ್ಯಾವಳಿಯಲ್ಲಿ ಭಾಗವಹಿಸುವ ರಾಜ್ಯ ತಂಡದ ಕ್ರೀಡಾಪಟುಗಳ ಸುರಕ್ಷತೆ ಹಾಗೂ ಮೇಲ್ವಿಚಾರರಾಗಿ ಬೆಳ್ಳಾರೆ ಕೆ.ಪಿ.ಎಸ್. ಪ್ರೌಢ ಶಾಲಾ ಶಿಕ್ಷಕಿ ಪುಷ್ಪಾವತಿ ಪಿ. ಇವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಇವರು ನೇಮಕ ಮಾಡಿರುತ್ತಾರೆ. ಕ್ರೀಡಾ
ಪಟುಗಳು ಮತ್ತು ಕ್ರೀಡಾಧಿಕಾರಿಗಳು. ಎ.1 ರಂದು 10.40ರ ಚೆನ್ನೈ ಮೈಲ್ ಎಕ್ಸ್‌ಪ್ರೆಸ್‌ನಲ್ಲಿ ಹೊರಟು ಎ.5ರಂದು ಬಿಹಾರದ ಪಾಟ್ನಾದಲ್ಲಿ ವರದಿಮಾಡಿಕೊಳ್ಳಬೇಕಾಗಿ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದ್ದಾರೆ.