ಅರಂತೋಡು: ತೋಟಂಪ್ಪಾಡಿ ಉಳ್ಳಾಕುಳು ದೈವಗಳ ವಾರ್ಷಿಕ ನೇಮೋತ್ಸವಕ್ಕೆ ಗೊನೆ ಮುಹೂರ್ತ

0

ಅರಂತೋಡು ಗ್ರಾಮದ ತೋಟಂಪ್ಪಾಡಿ ಶ್ರೀ ಉಳ್ಳಾಕುಳು ಉಳ್ಳಾಲ್ತಿ ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವವು ಎ.24 ಮತ್ತು 25ರಂದು ಜರುಗಲಿದ್ದು, ನೇಮೋತ್ಸವಕ್ಕೆ ಎ.1ರಂದು ಮುಹೂರ್ತದ ಗೊನೆ ಕಡಿಯಲಾಯಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಸಮಿತಿ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.