ಶತಾಯುಷಿ ಶ್ರೀಮತಿ ನೀಲಮ್ಮ ಪಿಂಡಿಮನೆ ನಿಧನ

0

ಅರಂತೋಡು ಗ್ರಾಮದ ದಿ. ಕೃಷ್ಣಪ್ಪ ಗೌಡರ ಧರ್ಮಪತ್ನಿ ಶತಾಯಿಷಿ ಶ್ರೀಮತಿ ನೀಲಮ್ಮ ಪಿಂಡಿಮನೆ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಎ.4ರಂದು ರಾತ್ರಿ ನಿಧನರಾದರು. ಅವರಿಗೆ 100 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಪಿ.ಕೆ‌. ಉಮೇಶ್, ಸೀತಾರಾಮ, ನಾರಾಯಣ, ತಿಮ್ಮಯ್ಯ, ದೊಡ್ಡಯ್ಯ, ಪುತ್ರಿಯರಾದ ದೇವಕಿ, ಲೀಲಾವತಿ, ತೇಜಾವತಿ ಸೇರಿದಂತೆ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರ ಕಾರ್ಯವು ಎ.5ರಂದು ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.