ಕೂತ್ಕುಂಜ: ಶ್ರೀ ದುರ್ಗಾ ಮಹಿಳಾ ಮಂಡಲದ ಪದಾಧಿಕಾರಿಗಳ ಪದಗ್ರಹಣ

0

ಶ್ರೀ ದುರ್ಗಾ ಮಹಿಳಾ ಮಂಡಲ (ರಿ) ಕೂತ್ಕುoಜ , ಶ್ರೀದೇವಿ ಸಂಜೀವಿನಿ ಸಂಘ ಚಿದ್ಗಲ್, ಧರ್ಮಶ್ರೀ ನವೋದಯ ಸಂಘ ಚಿದ್ಗಲ್, ಧನು ಶ್ರೀ ನವೋದಯ ಸಂಘ ಚಿದ್ಗಲ್ , ದುರ್ಗಾ ಶ್ರೀ ರೈತ ಸಂಘ ಚಿದ್ಗಲ್ ಇವುಗಳ ಜಂಟಿ ಆಶ್ರಯದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮ ಹಾಗೂ ಶ್ರೀ ದುರ್ಗಾ ಮಹಿಳಾ ಮಂಡಲದ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭ ನಡೆಯಿತು.

ಪಂಜ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಮಂಜುಳಾ ಹತ್ಯಡ್ಕ ಉದ್ಘಾಟನೆ ನೆರವೇರಿಸಿದರು. ಶ್ರೀ ದುರ್ಗಾ ಮಹಿಳಾ ಮಂಡಲ ಕೂತ್ಕುoಜ ಇದರ ಅಧ್ಯಕ್ಷೆ ಶ್ರೀಮತಿ ಲತಾ ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಕೂತ್ಕುಂಜ ಮಹಿಳಾ ಸಂಘಟನೆ ಅಧ್ಯಕ್ಷೆ ಶ್ರೀಮತಿ ಚಂದ್ರಾ ಹೊನ್ನಪ್ಪ ಚಿದ್ಗಲ್, ಧನುಶ್ರೀ ನವೋದಯ ಸಂಫ ಚಿದ್ಗಲ್ ಇದರ ಅಧ್ಯಕ್ಷೆ ಶ್ರೀಮತಿ ಹೇಮಾ ವಸಂತ್ ಚಿದ್ಗಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಚಂದ್ರಾ ಹೊನ್ನಪ್ಪ ಚಿದ್ಗಲ್ ಸ್ವಾಗತಿಸಿದರು.‌ ವೇದಾ ಬಾಲಕೃಷ್ಣ ಚಿದ್ಗಲ್ ಪ್ರಾರ್ಥಿಸಿದರು. “ಪದ ಸ್ವೀಕಾರ ” ಕಾರ್ಯಕ್ರಮವನ್ನು ಚಂದ್ರಾವಹೊನ್ನಪ್ಪ ರವರು ನೆರವೇರಿಸಿದರು.

ನೂತನ ಅಧ್ಯಕ್ಷೆ ಶ್ರೀಮತಿ ದೇವಕಿ ಧರ್ಮಪಾಲ ಹಾಗೂ ಕಾರ್ಯದರ್ಶಿ ರೋಹಿಣಿ ರಮೇಶ ಕುಳ್ಳಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಹೇಮಾ ವಸಂತ್ ರವರು ಕಾರ್ಯಕ್ರಮ ನಿರೂಪಿಸಿದರು , ಶ್ರೀಮತಿ ವೀಣಾ ಗಿರಿಧರ್ ಇಟ್ಯಡ್ಕ ರವರು ಧನ್ಯವಾದ ಸಮರ್ಪಿಸಿದರು.

ಇತ್ತೀಚೆಗೆ ನಿಧನರಾದ ಸಂಘಗಳ ಹಿತೈಷಿ , 84 ವರ್ಷದ ಹಿರಿಯ ಸದಸ್ಯರಾದ ತಿಮ್ಮಕ್ಕ ಆದಪ್ಪ ಚಿದ್ಗಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ನುಡಿನಮನ ಅರ್ಪಿಸಲಾಯಿತು.

ಸದಸ್ಯರಿಗೆ ಹಲವು ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.