ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: 2023-24 ರ ಸಾಲಿನಲ್ಲಿ ಅಂದಾಜು ರೂ. 1.81 ಕೋಟಿ ಲಾಭ

0

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2023-24ರ ಸಾಲಿನಲ್ಲಿ ಅಂದಾಜು ರೂ. 1.81 ಕೋಟಿ ಲಾಭ ಗಳಿಸಿರುತ್ತದೆ. ಇದು ಈ ವರೆಗಿನ ಗರಿಷ್ಠ ಲಾಭವಾಗಿದೆ.

ಈ ಲಾಭ ಕಳೆದ ಆರ್ಥಿಕ ವರ್ಷದ ಲಾಭಕ್ಕಿಂತ ಶೇ.20.22ರಷ್ಟು ಅಧಿಕವಾಗಿದೆ. ಸಂಘವು 2023-24ನೇ ಸಾಲಿನಲ್ಲಿ ರೂ. 106.96 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು ರೂ.492.87 ಕೋಟಿ ವಾರ್ಷಿಕ ವ್ಯವಹಾರ ನಡೆಸಿದೆ. ಸಂಘವು ರೂ.3.58 ಕೋಟಿ ವ್ಯಾಪಾರ ನಡೆಸಿ ರೂ.27.05 ಲಕ್ಷ ವ್ಯಾಪಾರ ಲಾಭಗಳಿಸಿದೆ. ಸದರಿ ವರ್ಷದಲ್ಲಿ ವ್ಯಾಪಾರದಲ್ಲಿ ಕಳೆದ ವರ್ಷಕ್ಕಿಂತ ಶೇ. 26.20 ಏರಿಕೆ ಆದರೆ ವ್ಯಾಪಾರ ಲಾಭದಲ್ಲಿ ಶೇ. 22.99 ರಷ್ಟು ಏರಿಕೆಯಾಗಿದೆ.

ಆರ್ಥಿಕ ವರ್ಷದಲ್ಲಿ ಸಂಘವು ರೂ. 50.07 ಕೋಟಿ ಠೇವಣಿ ಸಂಗ್ರಹಿಸಿದೆ ಮತ್ತು ಠೇವಣಿ ಸಂಗ್ರಹದಲ್ಲಿ ಕಳೆದ ವರ್ಷಕ್ಕಿಂತ ಶೇ. 5.79ರಷ್ಟು ವೃದ್ಧಿಯನ್ನು ಕಂಡಿದೆ. ಸಂಘವು ರೂ. 77.41ಕೋಟಿ ಸಾಲಗಳನ್ನು ವಿತರಿಸಿ ಸಾಲಗಳ ವಿತರಣೆಯಲ್ಲಿಯೂ ಕೂಡ ಕಳೆದ ಸಾಲಿನಿಂದ ಶೇ. 4.62ರಷ್ಟು ಅಧಿಕ ವಿತರಿಸಿದೆ. 31.03.2024ರ ಅಂತ್ಯಕ್ಕೆ ಸಾಲಗಳ ಹೊರಬಾಕಿ ರೂ.83.43 ಕೋಟಿ ಇದ್ದು ಇದು ಕಳೆದ ವರ್ಷಕ್ಕಿಂತ ಶೇ.7.29ರಷ್ಟು ಅಧಿಕವಾಗಿದೆ. ಸಾಲ ವಸೂಲಾತಿ ಪ್ರಮಾಣ ಶೇ.97.82 ಆಗಿದೆ.

ಸಂಘವು ಜನ ಔಷಧಿ ಕೇಂದ್ರ, ಸಿ.ಎಸ್‌.ಸಿ ಕೇಂದ್ರ, ಬಾಡಿಗೆಗೆ ಸಭಾಂಗಣ,ಬಾಡಿಗೆಗೆ ಕೃಷಿ ಯಂತ್ರೋಪಕರಣಗಳು, 5 ಪಡಿತರ ಕೇಂದ್ರ, 3 ಗೊಬ್ಬರ,ಕ್ರಿಮಿನಾಶಕ ಮತ್ತು ಕೃಷಿ ಬಳಕೆ ಕೇಂದ್ರ, ಒಂದು ಪೂರ್ಣ ಪ್ರಮಾಣದ ಶಾಖೆ ಹಾಗೂ ನಾಲ್ಕು ವ್ಯಾಪಾರ ವಿಭಾಗಗಳು ಸೇವೆ ನೀಡುತ್ತಿರುವುದಾಗಿ ಸಂಘದ ಅಧ್ಯಕ್ಷ ಗಣೇಶ್ ಪೈ ವಿವರ ನೀಡಿದರು.


ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರಘುನಾಥ ರೈ ಕೆರೆಕ್ಕೋಡಿ, ನಿರ್ದೇಶಕರಾದ ಚಂದ್ರಶೇಖರಶಾಸ್ತ್ರಿ ಸಿ, ಸುಬ್ರಹ್ಮಣ್ಯ ಕುಳ, ಲಿಗೋಧರ ಆಚಾರ್ಯ,ಶ್ರೀಕೃಷ್ಣ ಭಟ್ ಪಟೋಳಿ, , ವಾಚಣ್ಣ ಕೆರೆಮೂಲೆ, ಚಿನ್ನಪ್ಪ ಗೌಡ ಚೊಟ್ಟೆಮಜಲು, ಕಿಟ್ಟಣ್ಣ ಪೂಜಾರಿ ಕಾಂಜಿ , ಮುದರ ಐವತ್ತೊಕ್ಲು, ಶ್ರೀಮತಿ ಮೋಹಿನಿ ಬೊಳ್ಮಲೆ, ಶ್ರೀಮತಿ ಹೇಮಲತಾ ಚಿದ್ಗಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ಉಪಸ್ಥಿತರಿದ್ದರು.