ಕೊರಂಬಡ್ಕದಲ್ಲಿ ನಾಗಬ್ರಹ್ಮ ಆದಿ ಮೊಗೇರ್ಕಳ, ಗುಳಿಗ ದೈವ, ಕೊರಗಜ್ಜ ದೈವದ ನೇಮೋತ್ಸವ

0

ಸುಳ್ಯ ಜಯನಗರದ ಕೊರಂಬಡ್ಕ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನ ಗುಳಿಗ ದೈವ, ಸ್ವಾಮಿ ಕೊರಗಜ್ಜ ದೈವಸ್ಥಾನ – ವ್ಯವಸ್ಥಾಪನಾ ಆಡಳಿತ ಕಾರ್ಯ ಸೇವಾ ಸಮಿತಿ ಟ್ರಸ್ಟ್ ಇದರ ಆಶ್ರಯದಲ್ಲಿ ದೈವಗಳ ಕಾಲಾವಧಿ ನೇಮೋತ್ಸವ ಎ.5 ಮತ್ತು ಎ.7ರಂದು ನಡೆಯಿತು.


ಎ.೬ರಂದು ಬೆಳಗ್ಗೆ ಗಣಪತಿ ಹವನ, ಅಪರಾಹ್ನ ಶ್ರೀ ಗುಳಿಗ ದೈವದ ನೇಮ, ಪ್ರಸಾದ ವಿತರಣೆ ನಡೆಯಿತು. ಸಂಜೆ ದೀಪಾರಾಧನೆ ಬಳಿಕ ಶ್ರೀ ನಾಗಬ್ರಹ್ಮ ದೇವರಿಗೆ ಮಹಾಪೂಜೆ ನಡೆದು ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ರಾತ್ರಿ 9ರಿಂದ ಶ್ರೀ ಮೊರ್ಗೇಕಳ ದೈವಗಳು ಗರಡಿ ಇಳಿದು, ಸತ್ಯದೇವತೆ ಶ್ರೀ ತನ್ನಿ ಮಾಣಿಗ ದೈವದ ನೇಮ, ಬಳಿಕ ಪಾತ್ರಿಗಳ ದರ್ಶನ ನಡೆಯಿತು.


ಎ.7ರಂದು ಮುಂಜಾನೆ ಪ್ರಸಾದ ವಿತರಣೆ. ಬಳಿಕ ಸ್ವಾಮಿ ಕೊರಗಜ್ಜ ದೈವದ ನೇಮ ನಡೆಯಿತು.ಮಧ್ಯಾಹ್ನ ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.