ಉಬರಡ್ಕ: ಫ್ರೆಂಡ್ಸ್ ಕ್ಲಬ್ ಹುಳಿಯಡ್ಕ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

0

ಉಬರಡ್ಕ ಮಿತ್ತೂರು ಗ್ರಾಮದ ಫ್ರೆಂಡ್ಸ್ ಕ್ಲಬ್ ಹುಳಿಯಡ್ಕ ಇದರ ಮಹಿಳಾ ಘಟಕ ಮತ್ತು ಪುರುಷ ಘಟಕದ ವತಿಯಿಂದ ಹುಳಿಯಡ್ಕದಿಂದ ಕುತ್ತಮೊಟ್ಟೆ ಮಾಡದ ತನಕ ಯುಗಾದಿ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮವು ಎ. 9 ರಂದು ನಡೆಯಿತು.


ಈ ಸಂದರ್ಭದಲ್ಲಿ ಕ್ಲಬ್ ನ ಗೌರವಾಧ್ಯಕ್ಷ ಚಂದ್ರಶೇಖರ ಪಾನತ್ತಿಲ, ಪುರುಷ ಘಟಕದ ಅಧ್ಯಕ್ಷ ರಮೇಶ್ ಪಾನತ್ತಿಲ, ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಬೈತಡ್ಕ, ನಿವೃತ್ತ ಯೋಧ ಜಯಕರ ಮಡ್ತಿಲ, ನಿವೃತ್ತ ಪೊಲೀಸ್ ಅಧಿಕಾರಿ ಶೀನಪ್ಪ ಸೂರ್ಯಮನೆ, ಹಾಗೂ ಕ್ಲಬ್ ನ ಮಹಿಳಾ ಘಟಕ ಮತ್ತು ಪುರುಷ ಘಟಕದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.