ಮರಕತಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ, ದೈವಗಳ ನೇಮೋತ್ಸವ ಸಂಪನ್ನ

0

ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದೇವಿಯ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಕ್ಷೇತ್ರ ಪಾಲಿನಿ ಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವ ಏ.22 – ಏ.23 ರಂದು ನಡೆಯಿತು.

ಏ.22 ರ ಬೆಳಿಗ್ಗೆ ಹಸಿರುವಾಣಿ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಪೂರ್ವಾಹ್ನ ಚಂಡಿಕಾ ಹೋಮ ನಡೆಯಿತು. ಅದೇ ದಿನ ಬೆಳಗ್ಗೆ ಅರ್ಧ ಏಕಾಹ ಭಜನೆ ಮುಂಜಾನೆ ಆರಂಭವಾಗಿ ಸೂರ್ಯಾಸ್ತದ ತನಕ ನಡೆಯಿತು. ಮಧ್ಯಾಹ್ನ
ಮಹಾಪೂಜೆ‌ ನಡೆದು ಬಳಿಕ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾತ್ರಿ ಮಹಾಪೂಜೆ ಬಳಿಕ ದೇವರ ಬಲಿ ಹೊರಟು ಶ್ರೀ ಭೂತ ಬಲಿ ಉತ್ಸವ, ವಸಂತಕಟ್ಟೆಪೂಜೆ ನಡೆಯಿತು.

ಏ. 23 ರ ಪೂರ್ವಾಹ್ನ ಗಣಪತಿ ಹವನ, ಕಲಶ ಪೂಜೆ ನಡೆದು ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆದು ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ವಿತರಿಸಲಾಯಿತು. ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆದು ರಾತ್ರಿ ಶ್ರೀ ಕ್ಷೇತ್ರದ ದೈವಗಳ ನೇಮೋತ್ಸವ ನಡೆಯಿತು. ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಮತ್ತು ಸದಸ್ಯರು, ಅಭಿವೃದ್ಧಿ ಸಮಿತಿಯವರು, ವಿವಿಧ ಸಮಿತಿಗಳ ಪದಾಧಿಕಾರಿಗಳು, ಊರ ಭಕ್ತರು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು.