ಪುತ್ತೂರು ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಶ್ರೀ ಲಕ್ಷ್ಮಿ ದೇವಿ ಬೆಟ್ಟದಲ್ಲಿ ಶ್ರೀ ಲಕ್ಷ್ಮಿ ದೇವಿ ಅಮ್ಮನವರ ವರ್ಷಾವಧಿ ಉತ್ಸವವು ಎ.26ರಂದು ಭಕ್ತಿ ಸಂಭ್ರಮದಿಂದ ನಡೆಯಿತು.
ಏ. 26 ರಂದು ಬೆಳಿಗ್ಗೆ ಗಣಪತಿ ಹೋಮ, ಮಹಾಪೂಜೆ, ನಂತರ ಪಾಷಾಣಮೂರ್ತಿಗೆ ತಂಬಿಲ, ನಾಗದೇವರಿಗೆ ತಂಬಿಲ, ಗುಳಿಗನಿಗೆ ತಂಬಿಲ ನಡೆಯಿತು. ಶ್ರೀ ಶನೀಶ್ವರ ಭಜನಾ ಮಂಡಳಿ ಬನ್ನೂರು ಪುತ್ತೂರು ಇವರಿಂದ ಕುಣಿತ ಭಜನೆ, ಮೂಡಯೂರು ಚಂದ್ರಶೇಖರ ಮತ್ತು ಬಳಗದವರಿಂದ ಸ್ಯಾಕ್ಸ್ ಫೋನ್ ವಾದನ ನಡೆದ ಬಳಿಕ ಮಧ್ಯಾಹ್ನ ಮಹಾಪೂಜೆ ದೇವಿ ದರ್ಶನ ಮತ್ತು ಪ್ರಸಾದ ವಿತರಣೆ ನಡೆದು ಮಹಾ ಅನ್ನಸಂತರ್ಪಣೆ ನಡೆಯಿತು.
ಸಂಜೆ ಶ್ರೀ ಸತ್ಯನಾರಾಯಣ ಪೂಜೆ ಜರುಗಿತು.
ಮಸ್ಕಿರಿ ಕುಡ್ಲ ದೀಪಕ್ ಪಾಣಾಜೆ ಇವರಿಂದ ತೆಲಿಕೆ ಬಂಜಿನಿಲಿಕೆ, ರಾತ್ರಿ ಮಹಾಪೂಜೆ ದೇವಿ ದರ್ಶನ ಮತ್ತು ಪ್ರಸಾದ ವಿತರಣೆ ನಡೆದ ಬಳಿಕ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಬಪ್ಪನಾಡು ಮೇಳದವರಿಂದ ತುಳು ಯಕ್ಷಗಾನ ಬಯಲಾಟ ನಾಡೂರ ನಾಗಬನ ನಡೆಯಿತು.