ಮೇ.1- 5: ಕುಕ್ಕನ್ನೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಗಳ ಕಾಲಾವಧಿ ಉತ್ಸವ

0

ಜಾಲ್ಸೂರು ಗ್ರಾಮದ ಕುಕ್ಕನ್ನೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಕಾಲಾವಧಿ ಜಾತ್ರೋತ್ಸವವು ಮೇ.1ರಿಂದ ಮೇ.5ರವರೆಗೆ ಜರುಗಲಿದ್ದು, ಎ.25ರಂದು ಬೆಳಿಗ್ಗೆ ಕಾಲಾವಧಿ ಉತ್ಸವಕ್ಕೆ ಗೊನೆ ಮುಹೂರ್ತ ನಡೆಯಿತು.

ಮೇ.1ರಂದು ಬೆಳಿಗ್ಗೆ ಮುಂಡೈಗೆ ಶೃಂಗಾರ, ರಾತ್ರಿ ದೇವರ ಪೂಜೆ ಜರುಗಲಿದೆ. ಮೇ.2ರಂದು ಬೆಳಿಗ್ಗೆ ಗಣಪತಿ ಹೋಮ, ನಂತರ ಧ್ವಜಾರೋಹಣ, ರಾತ್ರಿ ಸಂಕ್ರಮಣ ವಾಲಸಿರಿ ಕೊಡಿಬಂಡಿ ಉತ್ಸವ ಜರುಗಲಿದೆ.
ಮೇ.3ರಂದು ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದ್ದು, ಮೇ.4ರಂದು ಬೆಳಗ್ಗಿನ ಜಾವ ನಡುಬಂಡಿ ಉತ್ಸವ, ಸಿಡಿಮದ್ದು ಪ್ರದರ್ಶನ ನಡೆಯಲಿದೆ.

ಮೇ.4ರಂದು ಬೆಳಿಗ್ಗೆ ಕಿರಿಯರ ನೇಮ, ನಾಯರ್ ನೇಮ, ಹರಿಕೆ ಕಾಣಿಕೆ ಸ್ವೀಕಾರ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಸಂಕ್ರಮಣಪೂಜೆ – ಸಮಾರಾಧನೆ ನಡೆಯಲಿದೆ.

ಮೇ.5ರಂದು ಬೆಳಿಗ್ಗೆ ವಾಲಸಿರಿ ಕಡೆಬಂಡಿ ಉತ್ಸವ, ಹಿರಿಯರ ನೇಮ, ಹರಿಕೆ ಕಾಣಿಕೆ ಸ್ವೀಕಾರ, ಆರಾಟ, ಧ್ವಜಾವರೋಹಣ, ಅಂಬುಕಾಯಿ , ಹಣ್ಣಕಾಯಿ ನಡೆಯಲಿದೆ.