ಬಹು ವರ್ಷದ ಬೇಡಿಕೆ : ಬಡ್ಡಡ್ಕದಲ್ಲಿ ನಿರ್ಮಾಣವಾಗಲಿದೆ ಬಿ.ಎಸ್.ಎನ್.ಎಲ್.ಟವರ್

0

ಸ್ಥಳಕ್ಕೆ ಭೇಟಿ ನೀಡಿದ ಶಾಸಕಿ ಕು.ಭಾಗೀರಥಿ ಮುರುಳ್ಯ

ಅಲೆಟ್ಟಿ ಪಂಚಾಯತ್ ವ್ಯಾಪ್ತಿಯ ಬಡ್ಡಡ್ಕದಲ್ಲಿ ನೆಟ್ ವರ್ಕ್ ಸಮಸ್ಯೆ ಇದ್ದು ಅತೀ ಅವಶ್ಯಕವಾಗಿ ಟವರ್ ನಿರ್ಮಿಸುವಂತೆ ಈ ಭಾಗದ ನಾಗರಿಕರ ಬಹು ದೊಡ್ಡ ಬೇಡಿಕೆಯಾಗಿದ್ದು ಟವರ್ ನಿರ್ಮಾಣಕ್ಕೆ ಸ್ಥಳ ಗುರುತು ಮಾಡಲಾಗಿತ್ತು.


ಸ್ಥಳೀಯ ಬಡ್ಡಡ್ಕ ನಿವಾಸಿ
ಕಮಲಾಕ್ಷ ರವರಿಗೆ ಸೇರಿದ ಜಾಗದಲ್ಲಿ ಟವರ್ ನಿರ್ಮಿಸಲು ಗುರುತಿಸಿ ಅರ್ಥ್ ವರ್ಕ್ ಕಾಮಗಾರಿಯನ್ನು ಜೆ.ಸಿ.ಬಿ‌ ಬಳಸಿ‌ ಮಾಡುವ ಸಂದರ್ಭದಲ್ಲಿ ಪಕ್ಕದಲ್ಲಿ ಅರಣ್ಯ ಇಲಾಖೆಯ ಗಡಿ ಗುರುತಿನ ಗುಪ್ಪೆ ಕಲ್ಲಿಗೆ ಹಾನಿಯಾದುದರಿಂದ ಇಲಾಖೆಯವರು ಅಡ್ಡಿ ಪಡಿಸಿ ಬೇರೆ ಕಡೆ ಟವರ್ ನಿರ್ಮಿಸುವಂತೆ ಸೂಚಿಸಿದ್ದರು.

ಇದರಿಂದಾಗಿ ಪರಿಸರದ ಜನರು ನಿರಾಶೆಗೊಂಡು ಸ್ವಲ್ಪ ಮಟ್ಟಿನ ಗೊಂದಲ ಉಂಟಾಗಿದ್ದು ವಿಷಯದ ಕುರಿತು ಶಾಸಕಿಯವರಿಗೆ ದೂರು ನೀಡಲಾಗಿತ್ತು. ಅದರಂತೆ ಸಮಸ್ಯೆ ಪರಿಹರಿಸುವ ಸಲುವಾಗಿ ಶಾಸಕಿ ಕು. ಭಾಗೀರಥಿ ಮುರುಳ್ಯ ರವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರ್ಯಾಯ ಸ್ಥಳದ ಬಗ್ಗೆ ಸ್ಥಳೀಯ ನಿವಾಸಿಗಳ ಜತೆ ಮಾತುಕತೆ ನಡೆಸಿದರು.


ಬಳಿಕ ಸ್ಥಳೀಯರಾದ ಶ್ರೀಮತಿ ಸರಸ್ವತಿ ಕೃಷ್ಣಪ್ಪ ಗೌಡ ರವರ ಜಾಗದಲ್ಲಿ ಟವರ್ ನಿರ್ಮಿಸಲು ಅನುಮತಿ ಕೇಳಲಾಯಿತು. ಸಾರ್ವಜನಿಕರ ‌ಹಿತದೃಷ್ಟಿಯಿಂದ ತನ್ನ ಜಾಗದಲ್ಲಿ ಟವರ್ ನಿರ್ಮಿಸಲು ಒಪ್ಪಿಗೆಯನ್ನು ಅವರು ನೀಡಿದ ಮೇರೆಗೆ ಶಾಸಕಿಯವರು ಕೆಲಸ ಆರಂಭಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ
ಅಲೆಟ್ಟಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಭಾರತಿ ಉಳುವಾರು,ಶ್ರೀಮತಿ ಪುಷ್ಪ ಮೆದಪ್ಪ , ಸುದರ್ಶನ್ ಪಾತಿಕಲ್ಲು, ಹರಿಪ್ರಸಾದ್ ಕಾಪುಮಲೆ, ಹರೀಶ್ ಕೆ.ಜೆ,ವೈಕುಂಠ ನಾಯಕ್ ದೋಣಿಮುಲೆ, ದಿನೇಶ್ ಬಡ್ಡಡ್ಕ,ಶಶಿಧರ ತಿಮ್ಮನ ಮೂಲೆ, ಕಮಲಾಕ್ಷ ಬಡ್ಡಡ್ಕ,ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಪುಂಡರಿಕ ಕಾಪುಮಲೆ ಹಾಗೂ ಸ್ಥಳೀಯ ನಿವಾಸಿಗಳು ಜತೆಯಲ್ಲಿದ್ದರು.