ಝಕರಿಯಾ ಜುಮ್ಮಾ ಮಸೀದಿ & ದರ್ಗಾ ಶರೀಫ್ ಬೆಳ್ಳಾರೆ ಇದರ ವತಿಯಿಂದ
ಈ ವರ್ಷದ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ಜಮಾತ್ ಸದಸ್ಯರಿಗೆ ಹಾಗೂ ಊರಿನ ಮಹನೀಯರು ಹಾಗೂ ಮಹಿಳೆಯರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ದುವಾ ಮಜಲಿಸ್ ಮಸೀದಿ ಅಧ್ಯಕ್ಷರಾದ ಯು.ಎಚ್.ಅಬೂಬಕ್ಕರ್ ಹಾಜಿ ರವರ ಅಧ್ಯಕ್ಷತೆಯಲ್ಲಿ ಮದರಸ ಸಭಾಂಗಣದಲ್ಲಿ ಮೇ.11ರಂದು ಮಗ್ರಿಬ್ ನಮಾಜ್ ಬಳಿಕ ನಡೆಯಿತು.
ಕಾರ್ಯಕ್ರಮವನ್ನು ಹಿದಾಯತುಲ್ ಇಸ್ಲಾಂ ಮದರಸ ಸದರ್ ಮುವಲ್ಲಿಮಾರಾದ ಮೊಹಮ್ಮದ್ ಮುಂಡೋಲೆ ನವಮಿ ದುಆ ಮಾಡುವುದರ ಮೂಲಕ ಚಾಲನೆಗೈದರು. ಈ ಸಂದರ್ಭದಲ್ಲಿ ಮಸೀದಿ ಉಪಾಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ, ಪ್ರದಾನ ಕಾರ್ಯದರ್ಶಿ ಬಷೀರ್ ಕಲ್ಲಪನೆ, ಕಾರ್ಯದರ್ಶಿ ಅಝರುದ್ದಿನ್ ಜಮಾತ್ ಆಡಳಿತ ಸಮಿತಿ ಸದಸ್ಯರಾದ ಉಸ್ಮಾನ್ ಹಾಜಿ ಬಾಯಂಬಾಡಿ,ಹಮೀದ್ ಅಲ್ಫಾ, ಬಷೀರ್ ಕೆ, ಹಿರಿಯರಾದ ಮಮ್ಮಾಲಿ ಹಾಜಿ, ಮಹಮೂದ್ ಬಿ. ಎ.ಮಾಸ್ತಿಕಟ್ಟೆ,ಆರಿಫ್ ಬೆಳ್ಳಾರೆ, ಇಬ್ರಾಹಿಂ, ಮಹಮ್ಮದ್ ಹಜಾಜ್, ಉಮ್ಮರ್ ಜಿ. ಎಂ, ಆಶಿಕ್ ಬೆಳ್ಳಾರೆ, ರಜಾಕ್, ರಜ್ಜು ಹಾಗೂ ಜಮಾತ್ ಸದಸ್ಯರು ಹಾಜರಿದ್ದರು.