ಯೋಗಾಸನದಲ್ಲಿ ವಿಶ್ವದಾಖಲೆ ಬರೆದ ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿನಿ ಜಿಶಾ ಕೊರಂಬಡ್ಕ

0

ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿನಿ ಜಿಶಾ ಕೊರಂಬಡ್ಕ ಉಪವಿಷ್ಟ ಕೋನಾಸನದಲ್ಲಿ 02 ಗಂಟೆ 6 ನಿಮಿಷ 50 ಸೆಕೆಂಡ್ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾರೆ.

ಇವರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಾಲ್ತಾಜೆ ಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು , ಕೊರಂಬಡ್ಕ ಕೇಶವ ಗೌಡ ಮತ್ತು ಶ್ರೀಮತಿ ವಿದ್ಯಾ ರವರ ಪುತ್ರಿ.

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರಿನ ಅಮರ ಯೋಗ ತರಬೇತಿ ಕೇಂದ್ರದ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ಅವರಿಂದ ಯೋಗ ತರಬೇತಿ ಪಡೆಯುತ್ತಿದ್ದಾರೆ.