ಸುಬ್ರಹ್ಮಣ್ಯದಲ್ಲಿ ಮರ ಉರುಳಿ ಬಿದ್ದು ಮಹಿಳೆ ಮೃತ್ಯು

0

ಕುಕ್ಕೆ ಸುಬ್ರಹ್ಮಣ್ಯದ ಕುಲ್ಕುಂದ ಬಸವನ ಮೂಲೆ ಎಂಬಲ್ಲಿ ಇಂದು ಸಂಜೆ ಗಾಳಿ ಮಳೆಗೆ ಬೃಹತ್ ಮರ ಬಿದ್ದು ಓರ್ವ ಮಹಿಳೆ ಮೃತಪಟ್ಟ ಘಟನೆ ನಡೆದಿದೆ.

ತೋಟದಲ್ಲಿ ಕಟ್ಟಿ ಹಾಕಿದ್ದ ಕರುವನ್ನು ಬಿಚ್ಚಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯ ಬೇಕಾಗಿದೆ.